ರಾಜ್ಯ
ಜೆಡಿಎಸ್ ಅಭ್ಯರ್ಥಿಯ ಪರವಾಗಿ ನಟಿ ಆಶಿಕಾ ರಂಗನಾಥ್ ಪ್ರಚಾರ
- by Nanje Gowda SS
- 2023-04-28 21:57:17
- 20 Comments
- 17 Views

ಯಲಹಂಕ : ಹ್ಯಾಟ್ರಿಕ್ ಜಯ ಸಾಧಿಸಿರುವ ಎಸ್ ಆರ್ ವಿಶ್ವನಾಥ್ ಕ್ಷೇತ್ರ ಯಲಹಂಕ, ನಾಲ್ಕನೇ ಜಯದ ನಿರೀಕ್ಷೆಯಲ್ಲಿ ಅವರಿದ್ದಾರೆ, ಆದರೆ ಅವರನ್ನು ಸೋಲಿಸುವ ಸಾಹಸಕ್ಕೆ ಕೈ ಹಾಕಿರೋದು ಜೆಡಿಎಸ್ ಅಭ್ಯರ್ಥಿ ಮುನೇಗೌಡ. ಯಲಹಂಕ ಕ್ಷೇತ್ರದಲ್ಲಿ ಎಂ.ಮುನೇಗೌಡ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ, ಹಾಗೆಯೇ ಜನರ ಬೆಂಬಲ ಸಹ ಇದೆ, ಇಂದು ಅವರ ಪರವಾಗಿ ಪ್ರಚಾರ ಮಾಡಲು ನಾಯಕ ನಟಿ, ಚುಟು ಚುಟು ಸಾಂಗ್ಸ್ ನ ಅಶಿಕಾ ರಂಗನಾಥ್ ಮಾಡಿದ್ರು. ಯಲಹಂಕ ನಗರ ಪ್ರಮುಕ ರಸ್ತೆಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ಮಾಡುವ ಮೂಲಕ ಜನರ ಗಮನ ಸೆಳೆದರು. ಸಿನಿಮಾ ನಟಿಯನ್ನ ಕಣ್ತುಂಬಿ ಕೊಳ್ಳಲು ರಸ್ತೆ ಬದಿಯಲ್ಲಿ ಜನರು ಸೇರಿದ್ದರು.
ಪ್ರಚಾರ ನಡುವೆ ಮಾಧ್ಯಮದೊಂದಿಗೆ ಮಾತನಾಡಿದ ಅಶಿಕಾ ರಂಗನಾಥ್ ಎಂ ಮುನೇಗೌಡರು ಸಿನಿಮಾ ನಿರ್ಮಾಪಕರಾಗಿದ್ದ ಕಾರಣಕ್ಕೆ ಅವರ ಪರಿಚಯ ಇದೆ, ಅವರೊಂದಿಗೆ ಉತ್ತಮ ಬಾಂಧವ್ಯ ಸಹ ಇದೆ, ಯಲಹಂಕ ಕ್ಷೇತ್ರಕ್ಕೆ ಬಂದಾಗ ಮುನೇಗೌಡರನ್ನ ಜನ ಪ್ರೀತಿಸುತ್ತಿರುವ ರೀತಿ ನೋಡಿ ಇದು ತುಂಬಾನೇ ಖುಷಿಯಾಗಿದೆ, ಚುನಾವಣೆಯ ಕಾರಣಕ್ಕೆ ಅವರ ಪರವಾಗಿ ಪ್ರಚಾರಕ್ಕೆ ಬಂದಿರುವುದು ಸಹ ಖುಷಿಗೆ ಕಾರಣವಾಗಿದೆ. ಒಬ್ಬ ಜನನಾಯಕನಿಗೆ ಇರಬೇಕಾದ ಎಲ್ಲಾ ಕ್ವಾಲಿಟಿ ಮುನೇಗೌಡರಲ್ಲಿದೆ, ಸಿನಿಮಾ ಮತ್ತು ರಾಜಕೀಯದ ನಡುವೆ ಸಂಬಂಧ ಇದೆ, ಸಿನಮಾ ಮಾಡುವುದು ಸಹ ಜನರಿಗಾಗಿ ಹಾಗೆಯೇ ಜನರ ಸೇವೆ ಮಾಡಲು ರಾಜಕೀಯ ಕ್ಷೇತ್ರ ಬೇಕು. ದೇಶವನ್ನ ಅಭಿವೃದ್ಧಿಯಾದ ಕೊಂಡ್ಯೂಯಲು ರಾಜಕೀಯ ಅಗತ್ಯವಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಎಂ. ಮುನೇಗೌಡ ಮಾತನಾಡಿ ಯಲಹಂಕ ಕ್ಷೇತ್ರಕ್ಕೆ ಉತ್ತಮ ಜನನಾಯಕ ಅಗತ್ಯವಿದೆ. ಇಲ್ಲಿನ ಜನ ಬದಲಾವಣೆ ಬಯಸುತ್ತಿದ್ದಾರೆ. ಈ ಸಲದ ಚುನಾವಣೆಯಲ್ಲಿ ಜೆಡಿಎಸ್ ಗೆ ಇಲ್ಲಿನ ಅಶೀರ್ವಾದ ಮಾಡುವುದ್ದಾಗಿ ಹೇಳಿದರು.
Popular Tags:

Nanje Gowda SS
AdminAt 29 years old, my favorite compliment is being told that I look like my mom. Seeing myself in her image, like this daughter up top, makes me so proud of how far I’ve come, and so thankful for where I come from.
Related Post
Layout not defined
Layout not defined
Layout not defined
Layout not defined
Layout not defined