DECEMBER 9, 2022
ರಾಜ್ಯ

ಬಿಜೆಪಿ ಅಭ್ಯರ್ಥಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕಿಡ್ನಾಪ್ ಷಡ್ಯಂತ್ರ

post-img
ಯಲಹಂಕ ; ಬೆಂಗಳೂರು ನಗರ ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ವಿರುದ್ಧ ಷಡ್ಯಂತ್ರ ಮಾಡಿದ್ದ ವೀಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ ಮುನೇಗೌಡರೇ ಷಡ್ಯಂತ್ರ ಮಾಡಿ ತನ್ನ ಕುಟುಂಬದ ಸದಸ್ಯರನ್ನ ತಾನೇ ಕಿಡ್ನಾಪ್ ಮಾಡಿಸುವುದು. ನಂತರ ಈ ಪ್ರಕರಣವನ್ನು ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ಮೇಲೆ ಹಾಕುವುದು. ಆ ಮೂಲಕ ಯಲಹಂಕ ಕ್ಷೇತ್ರದ ಜನರನ್ನು ದಿಕ್ಕುತಪ್ಪಿಸಿ, ಜನರಿಂದ ಅನುಕಂಪಗಿಟ್ಟಿಸಿ ಮತಗಳಿಸುವುದು ಉದ್ದೇಶವಾಗಿತ್ತು. ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿ ವೈರಲ್ ಆಗ್ತಿವೆ. ಈ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಯಲಹಂಕ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು, ಪ್ರತಿಭಟನೆಗೆ ಇಳಿದಿದ್ದಾರೆ. ಇಂದು ಯಲಹಂಕ ಪೊಲೀಸ್ ಠಾಣೆ, ಯಲಹಂಕ ಉಪನಗರ, ರಾಜಾನುಕುಂಟೆ, ಸೋಲದೇವನಹಳ್ಳಿ ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗಳ ಬಳಿ ನೂರಾರು, ಸಾವಿರಾರು ಜನ ಕಾರ್ಯಕರ್ತರು ಜಮಾವಣೆಯಾಗಿ ಮುನೇಗೌಡರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಷಡ್ಯಂತ್ರ ಮಾಡಿ ಎಸ್.ಆರ್.ವಿಶ್ವನಾಥ್ ರನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವುದು ಜೆಡಿಎಸ್ ಮುನೇಗೌಡರ ಹುನ್ನಾರವಾಗಿತ್ತು. ಇದೀಗ ಯಲಹಂಕ ಕ್ಷೇತ್ರದಾದ್ಯಂತ ಈ ವೀಡಿಯೋಗಳು ಅಲ್ಲೋಲ-ಕಲ್ಲೋಲ ಸೃಷ್ಟಿಸುತ್ತಿವೆ. ಚುನಾವಣೆ ಸಮೀಸುತ್ತಿರುವುದರಿಂದ ಕ್ಷೇತ್ರದಲ್ಲಿ ಅಹಿತಕರ ವಾತಾವರಣ ಸೃಷ್ಟಿಸಿ ಮತಗಳಿಸಬೇಕೆಂಬ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ತಂತ್ರಗಾರಿಕೆ ನಡೆಯುವುದಿಲ್ಲ. ಷಡ್ಯಂತ್ರದ ವೀಡಿಯೋ ಬಗ್ಗೆ ರಾಜಾನುಕುಂಟೆ ಪೊಲೀಸರಿಗೆ ಇಂದು ವಿಶ್ವನಾಥ್ ದೂರು ನೀಡಿದ್ದಾರೆ. ಪೊಲೀಸರು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಎಸ್.ಆರ್.ವಿಶ್ವನಾಥ್ ಮಾಧ್ಯಮಗಳಿಗೆ ತಿಳಿಸಿದರು..    
Ad Image
author-img_1

Nanje Gowda SS

Admin

At 29 years old, my favorite compliment is being told that I look like my mom. Seeing myself in her image, like this daughter up top, makes me so proud of how far I’ve come, and so thankful for where I come from.

Related Post

Layout not defined Layout not defined Layout not defined Layout not defined Layout not defined

About Us

TechManyata is Web Development Company in Bangalore. Software Development Company in Bangalore

Instagram

Cart