ಗ್ರಾಮೀಣ ಠಾಣೆ ಪೊಲೀಸರ ಚುರುಕಿನ ದಾಳಿ: ಎಕ್ಕಾ ರಾಜಾ ರಾಣಿ ಹಾಗೂ ಓಸಿ ಆಡುತ್ತಿದ್ದ 7 ಜನ ವಶಕ್ಕೆ

ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಹಾಗು ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 47210 ರೂ. ವಶಪಡಿಸಿಕೊಳ್ಳಲಾಗಿದೆ.
ಮತ್ತು ಕಿರೇಸೂರ ಗ್ರಾಮದಲ್ಲಿ ಓಸಿ ಮಟ್ಕಾ ನಡೆಸುತ್ತಿದ್ದ ಓರ್ವನನ್ನು ಸಹ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿ.ಬಂಧಿತನಿಂದ ಪೊಲೀಸರು 5150ರೂ. ವಶಪಡಿಸಿಕೊಂಡಿದ್ದಾರೆ.

ಇನ್ನು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಧಾರವಾಡ ಗ್ರಾಮೀಣ ವಿಭಾಗದ ಎಸ್.ಪಿ ಹಾಗೂ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಮ್.ಆರ್.ಚನ್ನಣ್ಣವರ ರವರ ನೇತೃತ್ವದಲ್ಲಿ ಸಚೀನ ಆಲಮೇಲಕರ ಪಿ.ಎಸ್.ಐ (ಎಲ್.& ಓ), ಶ್ರೀಮತಿ ಚಾಮುಂಡೇಶ್ವರಿ ಡಿ (ಮ.ಪಿ.ಎಸ್.ಐ) ಹಾಗೂ ಸಿಬ್ಬಂದಿ ಜನರಾದ ಎ ಎಸ್ ಐ. ಎನ್.ಎಮ್.ಹೊನ್ನಪ್ಪನವರ, ವಾಯ್.ಜಿ.ಶಿವಮ್ಮನವರ ಎ.ಎಸ್.ಐ, ಎ.ಎ. ಕಾಕರ , ಚನ್ನಪ್ಪ ಬಳ್ಕೊಳ್ಳಿ ಹಾಗೂ ಮಾಂತೇಶ ಮದ್ದೀನ ರವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡು ಪ್ರಕರಣಗಳನ್ನು ಬೇದಿಸಿದ್ದಾರೆ. ಇವರ ಕಾರ್ಯವೈಖರಿಯನ್ನು ಧಾರವಾಡ ಜಿಲ್ಲಾ ಎಸ್ ಪಿ ಅವರು ಶ್ಲಾಘಿಸಿದ್ದಾರೆ.