ನಡುರಸ್ತೆಯಲ್ಲಿಯೇ ಮಹಿಳೆಗೆ ಚಪ್ಪಲಿ ಹಾಗು ಇಟ್ಟಂಗಿಯಿಂದ ಥಳಿತ

ಹುಬ್ಬಳ್ಳಿ: ಹಾಡುಹಗಲೇ ಮಹಿಳೆಯೊಬ್ಬಳನ್ನು ಅಟ್ಟಾಡಿಸಿಕೊಂಡು ಇಟ್ಟಂಗಿ, ಚಪ್ಪಲಿಯಿಂದ ಥಳಿಸಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ನಡೆದಿದೆ.
ಹಲ್ಲೆಗೆ ಅನೈತಿಕ ಸಂಬಂಧವೇ ಕಾರಣ ಎಂದು ಶಂಕಿಸಲಾಗಿದ್ದು, ಹಲ್ಲೆಗೊಳಗಾದ ಮಹಿಳೆ ಹಾಗೂ ಹಲ್ಲೆ ಮಾಡಿದ ವ್ಯಕ್ತಿ ನಡುವೆ ಅಕ್ರಮ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದೆ ಎಂಬುವಂತ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಇನ್ನೂ ವ್ಯಕ್ತಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಆರೋಪ ಮಾಡಿದ ವ್ಯಕ್ತಿಯ ಕುಟುಂಬಸ್ಥರು, ಸುಮಾರು 10 ವರ್ಷಗಳಿಂದ ಕಿಮ್ಸ್ ನಲ್ಲಿ ಆಯಾ ಕೆಲಸ ಮಾಡುತ್ತಿದ್ದ ಮಹಿಳೆಗೆ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಳ್ಳೆಗೊಳಗಾದ ತಂಗಿಯನ್ನು ಬಿಡಿಸಲು ಬಂದ ಅಕ್ಕನ ಮೇಲೆಯೂ ಹಲ್ಲೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು, ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮಹಿಳೆ ಅಂತಾ ನೋಡದೆ ಎಲ್ಲರು ಸೇರಿ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದು ಎಷ್ಟು ಸರಿ ಅಂತಾ ಸಾರ್ವಜನಿಕರ ಮಾತಾಡುತ್ತಿದ್ದಾರೆ