ಗಾಂಜಾ ಮಾರಾಟ ಮಾಡುತ್ತಿದ ಆರೋಪಿಗಳ ಹೆಡೆಮುರಿ ಕಟ್ಟಿದ ಇನ್ಸಪೆಕ್ಟರ ಚನ್ನಣ್ಣವರ & ಟೀಮ್

ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ಧಾರವಾಡ ಸಿಎನ್ ಪೊಲೀಸರು ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಗದಗ ರಸ್ತೆಯ ಹಳ್ಯಾಳ ಪಾರ್ಕ್’ದಲ್ಲಿ ಆರೋಪಿ ಹಸನ ನಾಯಕ ಎಂಬಾತ ತನ್ನ ಸ್ಕೂಟಿಯಲ್ಲಿ ಗಾಂಜಾ ಮಾರಾಟ ಮಾಡುವ ಖಚಿತ ಮಾಹಿತಿ ಮೇರೆಗೆ ಧಾರವಾಡ ಸಿಇನ್ ಪೊಲೀಸ್ ಠಾಣೆ ಡಿ.ಎಸ್.ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಹಾಗೂ ಮತ್ತವರ ಸಿಬ್ಬಂದಿ ದಾಳಿ ನಡೆಸಿ ಮಂಟೂರ ರಸ್ತೆಯ ನಿವಾಸಿ ಹಸನ ಜುಬೇರ್ ನಾಯಕ ಎಂಬಾತನನ್ನು ಬಂಧಿಸಿ 450 ಗ್ರಾಂ ಗಾಂಜಾ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದಲ್ಲದೇ ಇನ್ನೋರ್ವ ಆರೋಪಿ ಸಂಕೇಶ್ವರ ಮೂಲದ ಹಬೀಬ ಜಮಾದಾರ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿಬ್ಬಂದಿ ಎನ್.ಎಂ.ಹೊನ್ನಪ್ಪನವರ, ನಂದೀಶ ವಡ್ರಾಳೆ, ಅಬ್ದುಲ್ ಕಾಕರ, ಮಾಂತೇಶ ಮದ್ದೀನ್, ಚೆನ್ನಪ್ಪ ಬಳ್ಳೊಳ್ಳಿ, ನಾಗಪ್ಪ ಸಂಶಿ, ಸಿ.ಬಿ.ಜನಗಣ್ಣವರ ಸೇರಿದಂತೆ ಮುಂತಾದವರು ಇದ್ದಾರೆ.