ಶಿಕ್ಷಕರ ವರ್ಗಾವಣೆ ಮುಂದೂಡಿಕೆ ತಡೆಯಾಜ್ಞೆ ಹಿನ್ನಲೆಯಲ್ಲಿ ಇಲಾಖೆಯಿಂದ ಆದೇಶ – ಇನ್ನೂ ಯಾವಾಗ ಏನೋ…
ತಡೆಯಾಜ್ಞೆ ಇದ್ದರೂ ಕೂಡಾ ಶಿಕ್ಷಕರ ವರ್ಗಾವಣೆ ಮಾಡೇ ಮಾಡುತ್ತೇವೆ ತಡೆಯಾಜ್ಞೆ ಬಂದ ಹೆಚ್ಚುವರಿ ಶಿಕ್ಷಕರನ್ನು ಬಿಟ್ಟು ಉಳಿದ ಪ್ರಕ್ರಿಯೆ ಆಗೇ ಆಗುತ್ತದೆ ಎಂದು ಹೇಳಿದ ಮಾತುಗಳು ಒಂದು ಕಡೆಗೆ ಆದರೆ ಇನ್ನೂ ಈ ಒಂದು ಮಾತುಗಳಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ಗೊಂಡಿದ್ದ ಶಿಕ್ಷಕರಿಗೆ ಶಿಕ್ಷಣ ಇಲಾಖೆ ದೊಡ್ಡ ಶಾಕ್ ನೀಡಿದೆ.ಹೌದು ಸೆಪ್ಟೆಂಬರ್ 7 ರಂದು ಶಿಕ್ಷಕರ ವರ್ಗಾವಣೆ ಗೆ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಿ ಆದೇಶ ವನ್ನು ಮಾಡಿದೆ

ಈ ಹಿಂದೆ ಕೂಡಾ ಶಿಕ್ಷಣ ಸಚಿವರು ಸೇರಿದಂತೆ ಹಲವರು ಈ ಒಂದು ವರ್ಗಾವಣೆ ವಿಚಾರದಲ್ಲಿ ಹಾಗೇ ತಡೆಯಾಜ್ಞೆ ವಿಚಾರದಲ್ಲಿ ಮಾತನಾಡಿ ಅದನ್ನು ಬಿಟ್ಟು ಉಳಿದ ಪ್ರಕ್ರಿಯೆ ಮಾಡುತ್ತೆವೆ ಎಂದಿದ್ದರು ಈ ಒಂದು ಕುರಿತು ಸಿದ್ದತೆ ಮಾಡಿಕೊ ಳ್ಳಲು ಹೇಳಿದ್ದರು ಈಗ ಇದೆಲ್ಲದರ ನಡುವೆ ಮುಂದೂಡಿ ಆದೇಶವನ್ನು ಮಾಡಿದ್ದು ಇದರಿಂದಾಗಿ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ನಾಡಿನ ಶಿಕ್ಷಕರು ಆತಂಕಗೊಂಡಿದ್ದಾರೆ ಇನ್ನೂ ವರ್ಗಾವಣೆ ಯಾವಾಗ ಏನೋ ಎಂಬ ಚಿಂತೆಯಲ್ಲಿ ಇದ್ದಾರೆ ಇನ್ನೂ ಇವೆಲ್ಲ ವುದರ ನಡುವೆ ಯಾವ ವಿಚಾರದಲ್ಲೂ ಕೂಡಾ ಶಿಕ್ಷಕರ ಸಂಘದ ರಾಜ್ಯ ನಾಯಕರು ಮಾತನಾಡದಿ ರೊದು ದೊಡ್ಡ ದುರಂತದ ವಿಚಾರವಾಗಿದೆ