Latestರಾಜ್ಯಶಿಕ್ಷಣಹುಬ್ಬಳ್ಳಿ-ಧಾರವಾಡ

BEO ಅವರಿಂದ ಶಿಕ್ಷಕರಿಗೆ ತುರ್ತು ಸಂದೇಶ – ಅತಿ ಜರೂರ ಸಂದೇಶ ದಲ್ಲಿ ಏನೇನು ಇದೆ ಗೊತ್ತಾ‌…..

ಗೌರಿಬಿದನೂರು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಮುಖ್ಯ ಶಿಕ್ಷಕರಿಗೆ ಜರೂರ ಸಂದೇಶವೊಂದನ್ನು ರವಾನಿಸಿದ್ದಾರೆ.ಈ ಒಂದು ಸಂದೇಶಗಳು ಕೇವಲ ಅಲ್ಲಿಯ ಶಿಕ್ಷಕ ಬಂಧುಗಳಿಗೆ ಅಷ್ಟೇ ಸಿಮೀತ ವಾಗದೆ ರಾಜ್ಯದ ಎಲ್ಲಾ ಶಿಕ್ಷಕರಿಗೆ ಅನುಕೂಲ ಆಗಲಿವೆ ಸಧ್ಯದ ಪರಿಸ್ಥಿತಿಯಲ್ಲಿ

ತಾಲೂಕಿನ ಎಲ್ಲಾ ಮುಖ್ಯ ಶಿಕ್ಷಕರ ಗಮನಕ್ಕೆ

  1. ಶಾಲೆಗಳಲ್ಲಿ/ ತರಗತಿ ವೇಳೆಯಲ್ಲಿ ಮಕ್ಕಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು.
  2. ಇಲಾಖಾ ಸುತ್ತೋಲೆಯಲ್ಲಿ ತಿಳಿಸಿರುವಂತೆ SOP, ಸಾಮಾಜಿಕ ಅಂತರ ಹಾಗೂ ಪ್ರತಿ ಡೆಸ್ಕ್ ಇಬ್ಬರು ಮಕ್ಕಳಂತೆ ಕೂಡಿಸುವುದು.
  3. ಪ್ರತಿದಿನ ಹಾಜರಾಗುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನರ್ ಬಳಸಿ ದೇಹದ ಉಷ್ಣತೆಯನ್ನು ಪರಿಶೀಲಿಸಿ ದಾಖಲೆ
    ನಿರ್ವಹಿಸುವುದು.
  4. ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್
    ಮತ್ತು ಕೈ ತೊಳೆಯುವ ನೀರಿನ ವ್ಯವಸ್ಥೆ ಮಾಡುವುದು.
  5. ಪ್ರತಿ ಶನಿವಾರ ತರಗತಿ ಕೊಠಡಿಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಸ್ವಚ್ಛಗೊಳಿಸುವುದು.
  6. ಇಲಾಖಾ ಸುತ್ತೋಲೆಯಲ್ಲಿ ತಿಳಿಸಿರುವಂತೆ ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿಕೊಂಡು ಬೋಧನೆ ಮಾಡುವುದು.
  7. ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಿ ದಾಖಲೆ ನಿರ್ವಹಿಸುವುದು.

ಮೇಲ್ಕಂಡ ಅಂಶಗಳ ಬಗ್ಗೆ ಪರಿಶೀಲನೆ ಮಾಡಲು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು, ನ್ಯಾಯಾಂಗ ಇಲಾಖಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ಮಾಡುತ್ತಿದ್ದು ಯಾವುದೇ ಶಾಲೆಯಲ್ಲಿ ಈ ಸಂಬಂಧ ನಿಯಮ ಉಲ್ಲಂಘನೆ ಆಗುವುದು ಕಂಡುಬಂದಲ್ಲಿ ಸದರಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿಷಯ ಶಿಕ್ಷಕರನ್ನು ಕೂಡಲೇ ಅಮಾನತ್ತು / ಶಿಸ್ತು ಕ್ರಮ ಕೈಗೊಳ್ಳಲು ಮಾನ್ಯ ಉಪನಿರ್ದೇಶಕರು (ಆಡಳಿತ ) ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ರವರಿಂದ ನಿರ್ದೇಶನ ವಾಗಿರುತ್ತದೆ. ಆದ್ದರಿಂದ ಯಾವುದೇ ಅವ್ಯವಸ್ಥೆಗಳು ಆಗದಂತೆ ಮುಖ್ಯ ಶಿಕ್ಷಕರು ಕ್ರಮ ವಹಿಸಲು ಸೂಚಿಸಿದೆ.

ಈ ಸಂಬಂಧ ಸಂಬಂಧಿಸಿದ ಕ್ಷೇತ್ರ ಸಿಬ್ಬಂದಿಯ ವರು(Eco/BRP/CRP) ಸೂಕ್ತ ರೀತಿಯಲ್ಲಿ ಮೇಲುಸ್ತುವಾರಿ ಮಾಡಲು ತಿಳಿಸಿದೆ.

ಕ್ಷೇತ್ರಶಿಕ್ಷಣಾಧಿಕಾರಿಗಳು ಗೌರಿಬಿದನೂರು

Leave a Reply

Your email address will not be published. Required fields are marked *

error: Content is protected !!