ಮೀನಾಕ್ಷಿ ಬಡಿಗೇರ ನೇತೃತ್ವದಲ್ಲಿ ಅದ್ದೂರಿಯಾಗಿ ಮಕ್ಕಳು ಮಹಿಳೆಯರ ಜೊತೆ ರಾಜ್ಯೋತ್ಸವ ಆಚರಣೆ

ರಾಜ್ಯದೆಲ್ಲೆಡೆ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ .ಕೆಲವು ಸಂಘ ಸಂಸ್ಥೆಗಳು ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಿದ್ದು.
ಇನ್ನು ಹಳೇ ಹುಬ್ಬಳ್ಳಿಯ ನೇಕಾರ ನಗರದಲ್ಲಿ ಮೀನಾಕ್ಷಿ ಬಡಿಗೇರ ನೇತೃತ್ವದಲ್ಲಿ ದಿವ್ಯ ಜ್ಯೋತಿ ಮಹಿಳಾ ಮಂಡಳ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ ಮಹಿಳೆಯರಿಗೆ ಸರಕಾರದಿಂದ ಮಹಿಳೆಯರಿಗೆ ಹಲವಾರು ಯೋಜನೆಗಳು ಇದ್ದು ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಯಿತು.
ಇನ್ನು ಇದೆ ಸಂಧರ್ಭದಲ್ಲಿ ಮಕ್ಕಳಿಂದ ಕನ್ನಡ ಹಾಡಿನ ಸ್ಪರ್ಧೆ ಹಾಗು ಹಲವಾರು ಕಾರ್ಯಕ್ರಮಗಳು ಆಯೋಜಿಸಿದ್ದರು ಇನ್ನು ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗು ಮಕ್ಕಳು ಭಾಗವಹಿಸಿ ತಮ್ಮ ಫ್ರತೀಭೆಯನ್ನು ಅನಾವರಣ ಗೊಳಿಸಿದ್ದು ಎಲ್ಲರ ಗಮಣ ಸೆಳೆಯಿತು.

ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಇನ್ನು ಈ ಒಂದು ಕಾರ್ಯಕ್ರಮದಲ್ಲಿ ಮುಖಂಡರಾದ ಮಂಜುನಾಥ ಚಿಂತಗಿಂಜಲ. ಶಿವಯ್ಯಾ ಹಿರೇಮಠ. ಪೂಜಾ ರಾಯ್ಕರ.ಲತಾ ಅಂಗಡಿ ಉಪಸ್ಥಿತರಿದ್ದರು
