ನಂಬಿಕೆಗೆ ದ್ರೋಹ ಬಗೆದು 6 ಲಕ್ಷ ಕಳ್ಳತನ ಮಾಡಿದ ಕಾರ್ಮಿಕ ಕೊನೆಗೂ ಅಂದರ್

ಕೆಲಸ ಮಾಡುತ್ತಿದ್ದ ಕಂಪನಿಯ ಕ್ಯಾಶ ಬಾಕ್ಸನಿಂದ ೬ ಲಕ್ಷ ಹಣ ಕಳ್ಳತನ ಮಾಡಿಕೊಂಡು ಹೊದ ಘಟನೆ ಹುಬ್ಬಳ್ಳಿಯ ಸುಳ್ಳ ರೋಡಿನಲ್ಲಿ ಇರುವ ಮನೋಜ ಪಾರ್ಕ ಹತ್ತಿರದ ನಡೆದಿದೆ.

ಮನೋಜ ಪಾರ್ಕನಲ್ಲಿ ಇರುವ ಕೆ ಕೆ ಬಿಜನೆಸ ಸೆಲ್ಯೂಷನ್ಸ ಜಿಯೋ ಮಾರ್ಟ ಅಂಗಡಿ ಹಾಗು ಗೂಡೌನ ಅಲ್ಲಿ ಕಳತ್ತನ ಮಾಡುವ ಉದ್ದೇಶದಿಂದ ಬೆಂಗಳೂರ ಮೂಲದ ಬಂಧಿತ ಕಳ್ಳನು ಕೆಲಸಕ್ಕೆ ಸೇರಿಕೊಂಡು ಮಾಲಿಕನ ವಿಶ್ವಾಸ ಗಳಿಸಿ ಯಾರಿಗು ಗೊತ್ತಾಗದ ಹಾಗೆ ಕ್ಯಾಶ ಬಾಕ್ಸನ ಪಾಸವರ್ಡ ತಿಳಿದುಕೊಂಡಿದ್ದಾ.

೨೫ ರ ರಾತ್ರಿ ಕಳ್ಳತನ ಮಾಡಲು ಹೊಂಚು ಹಾಕಿ ಅಲ್ಲಿಯೆ ಮಲಗುವುದಾಗಿ ಮಾಲಕರಿಂದ ಚಾವಿ ತೆಗೆದುಕೊಂಡಿದ್ದು. ತನ್ನ ಜೊತೆಯಲ್ಲಿ ಇದ್ದ ಕೆಲಸಗಾರನಿಗೆ ಸರಾಯಿ ಕುಡಿಸಿ ರಾತ್ರಿ ಪಾಸವರ್ಡ ಬಳಸಿ ಕ್ಯಾಶ ಲಾಕರ ಓಪನ ಮಾಡಿ ಅಲ್ಲಿದ್ದ ಸುಮಾರು ೬ ಲಕ್ಷ ರೂಪಾಯಿಗಳನ್ನು ಕಳ್ಳತನ ಮಾಡಿ ಪರಾರಿ ಆಗಿದ್ದಾನೆ.

ಈ ಕುರಿತು ಅಂಗಡಿ ಮಾಲಿಕರು ಕೇಶ್ವಾಪೊರಪೊಲೀಸ ಠಾಣೆಗೆ ದೂರು ನಿಡಿದ್ದು ಇನ್ನು ಕೇಶಾಪುರ ಪೊಲೀಸರು ತನಿಖೆ ನಡೆಸಿದಾಗ ಆರೋಪಿಯು ಶ್ರೀರಂಗಪಟ್ಟಣ ದಲ್ಲಿ ಇರುವುದರ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಧಿಸಿ ಸುಮಾರು ೪ ಲಕ್ಷ ೯೨ ಸಾವಿರ ಮೌಲ್ಯದ ಬೆಳ್ಳಿಯ ಆಭರಣ ಹಾಗು ಬೈಕನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನ ಮಾಡಿದ್ದ ಹಣದಲ್ಲಿ ಒಂದು ಡಿಯೋ ಬೈಕ .ಒಂದು ಮೊಬೈಲ್. ಬೆಳ್ಳಿಯ ಆಭರಣಗಳನ್ನು ಖರಿದಿಸಿರುತ್ತಾನೆ . ಎಲ್ಲವನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ .

ಇನ್ನು ಈ ಒಂದು ಕಾರ್ಯಾಚರಣೆ ಯನ್ನು ಪೊಲೀಸ ಆಯುಕ್ತರಾದ ಲಾಬೂರಾಮ . ಡಿಸಿಪಿ ಗಳಾದ ಸಾಹೀಲ ಬಾಗ್ಲಾ.ಗೋಪಾಲ ಬ್ಯಾಕೋಡ. ಎಸಿಪಿ ವಿನೋದ ಮುಕ್ತೆದಾರ ಇವರ ಮಾರ್ಗದರ್ಶನ ದಲ್ಲಿ
ಕೇಶ್ವಾಪೂರ ಠಾಣೆಯ ಇನ್ಸಪೆಕ್ಟರ ಜಗದೀಶ್ ಹಂಚಿನಾಳ ಇವರ ನೇತೃತ್ವದಲ್ಲಿ ಪಿಎಸಐ ಸದಾಶಿವ ಕಾನಟ್ಟಿ. ಕೆ ವಿ ಚಂದಾವರಕರ.ಆರ್ ಎನ್ ಗುಡದರಿ. ಜೊತೆಯಲ್ಲಿ ಸಿಬ್ಬಂದಿಗಳಾದ ಎಂ ಡಿ ಕಾಲವಾಡ. ಕೃಷ್ಣಾ ಕಟ್ಟಿಮನಿ. ಆನಂದ ಪುಜಾರ. ವಿಠಲ ಮಾದರ. ಎಸ್ ಎಸ್ ಕರೆಯಂಕಣ್ಣವರ. ಎಪ್ ಎಸ್ ರಾಗಿ. ಸಿ ಕೆ ಲಮಾಣಿ. ಹೆಚ ಆರ್ ರಾಮಾಪುರ. ಎಮ್ ಆರ್ ಬಾಳಿಗಿಡದ. ಸುನೀಲ ಪೂಜಾರಿ. ಮಲ್ಲಿಕಾರ್ಜುನ ಚಿಕ್ಕಮಠ. ಆರೋಪಿಯನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂದನಕ್ಕೆ ಒಳಪಡಿಸಿದ್ದಾರೆ ಇವರ ಕಾರ್ಯಕ್ಕೆ ಮೆಚ್ಚಿ ಪೊಲೀಸ ಆಯುಕ್ತಕರು ಬಹುಮಾನ ಘೋಷಿಸಿದ್ದಾರೆ