ಶೆಟ್ಟರ್ ಗೆ ಮಾಲಾರ್ಪಣೆ ಮಾಡಿದ ಪ್ರಲ್ಹಾದ್ ಜೋಶಿ

ಮಾಜಿ ಶಾಸಕ ದಿವಂಗತ ಸದಾಶಿವ ಶೆಟ್ಟರ್ ಅವರ 56ನೆಯ ಪುಣ್ಯಸ್ಮರಣೆ ನಿಮಿತ್ತ ಹುಬ್ಬಳ್ಳಿಯ ಹಳೇ ಕೋರ್ಟ್ ಸರ್ಕಲ್‌ನಲ್ಲಿರುವ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದ್ರು. ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ರು.
ನಂತರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಎಮ್.ಆರ್. ಪಾಟೀಲ್ ಮಾಲಾರ್ಪಣೆ ಮಾಡಿದ್ರು. ಸದಾಶಿವ ಶೆಟ್ಟರ್ ಅವರು 1967 ರಲ್ಲಿ ಉತ್ತರ ಕರ್ನಾಟಕದ ಪ್ರಥಮ ಜನಸಂಘದ ಶಾಸಕರಾಗಿ ಆಯ್ಕೆಯಾಗಿದ್ದರು. ಬಹಳ ಜನಪ್ರಿಯತೆ ಗಳಿಸಿದ್ದ ಅವರು ಹುಬ್ಬಳ್ಳಿಯ ಅಭಿವೃದ್ಧಿಗೆ ಹಲವು ಕೊಡುಗೆ ನೀಡಿದ್ದಾರೆ. ಸಮಾಜದ ಬಡವರ್ಗದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರ ರಾಜಕೀಯ ಜೀವನ ಎಲ್ಲರಿಗೂ ಮಾದರಿ ಎಂದು ಗಣ್ಯರು ಸ್ಮರಿಸಿದ್ರು.