ಕನ್ನಡಧ್ವಜ ಬಾಯಲ್ಲಿ ಕಚ್ಚಿಕೊಂಡು ನಗರ ಪ್ರದಕ್ಷಿಣೆ ಹಾಕಿದ ಶ್ವಾನ: ನಾಯಿಯ ಕನ್ನಡಾಭಿಮಾನ ಫುಲ್ ವೈರಲ್..

ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು. ಪ್ರತಿಯೊಬ್ಬರ ಕೈಯಲ್ಲಿಯೂ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಆದ್ರೆ ನಾಯಿಯೊಂದು ಬಾಯಲ್ಲಿ ಕನ್ನಡ ಧ್ವಜವನ್ನು ಕಚ್ಚಿಕೊಂಡು ಹೋಗುವ ಮೂಲಕ ಗಮನ ಸೆಳೆಯಿತು.
ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದಿದ್ದಾರೆ. ಚೆನ್ನಮ್ಮ ವೃತ್ತದ ನೂರಾರು ಜನರು ಕನ್ನಡ ಬಾವುಟ ಹಿಡಿದು ಜೈ ಘೋಷ ಕೂಗುತ್ತಿದ್ದರು. ಆಗ ಯಾರೋ ನಾಯಿ ಬಾಯಿಗೆ ಕನ್ನಡ ಧ್ವಜ ಕೊಟ್ಟಿದ್ದಾರೆ. ಅದೇ ಧ್ವಜವನ್ನು ಶ್ವಾನ ಬಾಯಲ್ಲಿ ಹಿಡಿದುಕೊಂಡು ನಗರವನ್ನು ಸುತ್ತು ಹಾಕಿದೆ.
ಆದ್ರೆ ಈ ನಾಯಿ ಮಾಲೀಕರು ಎಂಬುದು ತಿಳಿದು ಬಂದಿಲ್ಲ. ಆದ್ರೆ ನಾಯಿ ಮಾತ್ರ ಕನ್ನಡ ಧ್ವಜ ಹಿಡಿದು ಆಟೋದ ಹಿಂದೆ ಓಡಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು . ತಡವಾಗಿ ಬೆಳಕಿಗೆ ಬಂದಿದೆ