ಹುಟ್ಟು ಹಬ್ಬದ ದಿನದಂದೆ 30ಜನರ ಬಾಳಿಗೆ ಆಸರೆ ಆದ್ ಶ್ರೀಗಂಧ ಶೆಟ್….

ಯಾವುದೇ ಕೆಲಸ ಕಾರ್ಯಗಳಲ್ಲೂ ವಿಶೇಷತೆಗಳೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಿರುವ ಯುವ ಉದ್ಯಮಿ ಶ್ರೀಗಂಧ ಶೆಟ್ ಅವರು ಮತ್ತೊಂದು ಸಾಮಾಜಿಕ ಕೆಲಸದ ಮೂಲಕ ಮಾದರಿಯಾಗಿದ್ದಾರೆ.ಹೌದು ಹುಟ್ಟು ಹಬ್ಬವನ್ನು ಕುಟುಂಬವರೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳದ ಅವರು ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡದೇ ಅದೇ ಹಣವನ್ನು ಕೈ ಕಾಲು ಇಲ್ಲದವರಿಗೆ ಕೃತಕ ಕೈ ಕಾಲು ಜೋಡಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಶ್ರೀಗಂಧ ಅವರು ಆಚರಣೆ ಮಾಡಿಕೊಂಡಿದ್ದಾರೆ.25ನೇ ವರ್ಷದ ಹುಟ್ಟು ಹಬ್ಬವನ್ನು ಈಬಾರಿ ಇವರು ಕೆ.ಜಿ.ಪಿ. ಫೌಂಡೇಶನ್, ಲಿಯೋ ಕ್ಲಬ್ ಹುಬ್ಬಳ್ಳಿ ಮತ್ತು ಮಹಾವೀರ್ ಅಂಬ್ ಸೆಂಟರ್ ಹುಬ್ಬಳ್ಳಿ ಅವರ ಸಹಯೋಗದಲ್ಲಿ ಶ್ರೀಗಂಧ ಗಣೇಶ ಶೇಟ್ ಅವರು ಈ ಒಂದು ಕಾರ್ಯವನ್ನು ಮಾಡಿದರು.ಕೆ.ಜಿ.ಪಿ. ಫೌಂಡೇಶನ್ ಹಾಗೂ ಮಾಲೀಕರಾಗಿರುವ ಇವರು 25ನೇ ಹುಟ್ಟುಹಬ್ಬದ ಅಂಗವಾಗಿ ಕೃತಕ ಕೈ-ಕಾಲು ಜೋಡಣಾ ಶಿಬಿರ ಆಯೋಜಿಸಲಾಗಿತ್ತು. ಮಾನವೀಯತೆ ಮತ್ತು ಸಹಾಯದ ಸಂಕೇತವಾಗಿ ಈ ಶಿಬಿರವು ಅಗತ್ಯವಿರುವವರಿಗೆ ಹೊಸ ಜೀವನದ ಬೆಳಕನ್ನು ತರಲಾಯಿತು.ಕೈ ಕಾಲು ಇಲ್ಲದ 30 ಜನರಿಗೆ ಶ್ರೀಗಂಧ ಶೆಟ್ ಅವರು ಕೃತಕ ಕಾಲು ಕೈ ಜೋಡಣೆಯನ್ನು ಮಾಡಿಸುವ ಮೂಲಕ ಸಾರ್ಥಕತೆಯ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.ಈ ಒಂದು ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಘಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇನ್ನೂ ಕೆಜೆಪಿ ಗ್ರೂಪ್ ಚೇರಮನ್ ಆಗಿರುವ ಗಣೇಶ ಶೆಟ್ ಅವರು ಈ ಒಂದು ಅರ್ಥಪೂರ್ಣವಾದ ಕಾರ್ಯದ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಶ್ರೀಗಂದ ಶೆಟ್ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.