ಗಾಂಜಾ ನಶೆಯಲ್ಲಿ ತರಕಾರಿ ವ್ಯಾಪಾರಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳ್ಳಿಗ್ಗೆ ಮತ್ತೆ ಚಾಕು ಮಾರಕಾಸ್ತ್ರಗಳ ಹಾವಳಿ ನವನಗರದ ಎ ಪಿ ಎಮ್ ಸಿ ಯಲ್ಲಿ ತರಕಾರಿ ಮಾರುತಿದ್ದವರ ಮೇಲೆ ಕ್ಷುಲಕ ಕಾರಣಕ್ಕೆ ಗಾಂಜಾ ನಶೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ.

ನವನಗರದ ಎ ಪಿ ಎಂ ಸಿ ಯಲ್ಲಿ ಮುಂಜಾನೆ ಅಪ್ತಾಬ ಎಂಬ ಯುವಕ. ತನ್ನ ಸಹೋದರ ಹಾಗು ಅಳಿಯನ ಜೊತೆಯಲ್ಲಿ ತರಕಾರಿ ವ್ಯಾಪಾರ ಮಾಡುತಿದ್ದಾಗ ಪಕ್ಕದ ಅಂಗಡಿಯ ಮಾಲಿಕ ಮೌಲಾ ಮತ್ತು ತಾಜು ಸಹಿತ ನಾಲ್ಕು ಐದು ಜನರ ಗುಂಪು ಏಕಾ ಏಕಿ ಚಾಕು ಹಾಗು ಮಾರಕಾಸ್ತ್ರಗಳಿಂದ ಗಾಂಜಾ ಮತ್ತಿನಲ್ಲಿ ಯುವಕರ ಮೇಲೆ ಚಾಕು ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ.
ಇನ್ನು ಹಲ್ಲೆ ನಡೆಸಿದ ದೃಶ್ಯ ಸಿ ಸಿ ಟಿವಿಯಲ್ಲಿ ಸೇರೆಯಾಗಿದ್ದು ಪಬ್ಲಿಕ ಸಿಲ್ವರ ನ್ಯೂಸ ಗೆ ಲಭ್ಯವಾಗಿದೆ

ಹಲ್ಲೆ ನಡೆಸಿದ ಆರೋಪಿಗಳು ಸಧ್ಯ ಪರಾರಿ ಆಗಿದ್ದು . ಹಲ್ಲೆಗೆ ಒಳಗಾದ ಮೂವರನ್ನು ಅಲ್ಲೆ ಇದ್ದ ಸ್ಥಳಿಯರು ಚಿಕಿತ್ಸೆ ಗಾಗಿ ಕಿಂಸಗೆ ದಾಖಲಿಸಿದ್ದು . ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಇನ್ನು ಈ ಕುರಿತು ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ