40 ಪರ್ಸೆಂಟೇಜ್ ಸರ್ಕಾರ ಕಿತ್ತೊಗೆಯಲು ಆಮ್ ಆದ್ಮಿ ಪಾರ್ಟಿ ಬೆಂಬಲಿಸಿ – ಅರವಿಂದ ಕೇಜ್ರಿವಾಲ್…

ಹುಬ್ಬಳ್ಳಿ
ಕರ್ನಾಟಕದಲ್ಲಿ 40 ಪರ್ಸೆಂಟೇಜ್ ಸರ್ಕಾರವಿದೆ. ಅದನ್ನು ಕಿತ್ತೊಗೆಯಬೇಕಿದೆ. ಆ ನಿಟ್ಟಿನಲ್ಲಿ ಎಎಪಿ ಪಕ್ಷವನ್ನು ಬಲವರ್ಧನೆ ಮಾಡ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಹೇಳಿದರು.
ನಗರದ ಖಾಸಗಿ ಹೊಟರಲ್ ಹೊಟೆಲ್ ನಲ್ಲಿ ದಾವಣಗೆರೆಗೆ ತೆರಳುವ ಮುನ್ನ ಮಾತನಾಡಿದ ಅವರು,ದೆಹಲಿಯಲ್ಲಿ ನಾವೇನು ಮಾಡಿದ್ದೇವೆ ಅಂತ ಜನರಿಗೆ ಗೊತ್ತಿದೆ.
ಪಂಜಾಬ್ ಮತ್ತು ದೆಹಲಿಯಲ್ಲಿ
ಪ್ರಮಾಣಿಕ ಸರ್ಕಾರ ಕೊಟ್ಟಂತೆ ಇಲ್ಲಿಯೂ ಕೊಡ್ತೇವೆ. ಆ ನಿಟ್ಟಿನಲ್ಲಿ ಎಎಪಿ ಬಲವರ್ಧನೆ ಮಾಡ್ತೇವೆ ಎಂದರು.
ಇದೇ ವೇಳೆ ಮಾತನಾಡಿದ ಪಂಜಾಬ್ ಸಿಎಂ ಭಗವಂತ್ ಮಾನ್, ಕರ್ನಾಟಕದಲ್ಲಿರೋ ರೈತರ ಸಮಸ್ಯೆಯೇ ಪಂಜಾಬ್ ನಲ್ಲಿದೆ. ಕೇಂದ್ರದಲ್ಲಿ ಮೂರು ಕೃಷಿ ಕಾಯ್ದೆ ವಾಪಸ್ ತೆಗೆದುಕೊಂಡರು.
ಆದರೆ ಕರ್ನಾಟಕದಲ್ಲಿ ವಾಪಸ್ ಪಡೆದಿಲ್ಲ. ಇಲ್ಲಿನ ರೈತರು ಆತ್ಮಹತ್ಯೆಗೆ ಶರಣಾಗ್ತಿದಾರೆ. ನಾವು ಒಪಿಎಸ್ ಜಾರಿಗೆ ತಂದಿದ್ದೇವೆ. ಇಲ್ಲಿ ಇನ್ನೂ ಒಪಿಎಸ್ ಜಾರಿಗೆ ತಂದಿಲ್ಲ.
ಕರ್ನಾಟಕದ ರೈತರ ಸಮಸ್ಯೆಗಳನ್ನ ಎಎಪಿ ಬಗೆಹರಿಸುತ್ತೆ. ಸ್ವಚ್ಛ, ಭ್ರಷ್ಟಾಚಾರ ಮುಕ್ತ ಸರ್ಕಾರ ತರ್ತೇವೆ. ಉಚಿತ ವಿದ್ಯುತ್, ನಿರುದ್ಯೋಗ ನಿವಾರಣೆ, ಕೈಗಾರಿಕೆ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ.
ಪಂಜಾಬ್ ಮತ್ತು ದೆಹಲಿ ಮಾದರಿಯಲ್ಲಿ ಇಲ್ಲಿಯ ಜನರೂ ಎಎಪಿ ಸರ್ಕಾರ ತರಬೇಕು ಎಂದರು.
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನದವರಿಂದ ಹಿಂದೂ ದೇವಸ್ಥಾನ ಧ್ವಂಸ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲಿ ನಾವು ಭಾತೃತ್ವದಿಂದ ಇದ್ದೇವೆ, ಇಲ್ಲಿ ಆ ರೀತಿ ಆಗಿಲ್ಲ. ಖಲಿಸ್ತಾನ ಪ್ರತ್ಯೇಕತೆ ಹೋರಾಟದ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದರು.