Uncategorized

ಅವಳಿ ನಗರದಲ್ಲಿ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯಪಾನ ನಿಷೇಧ

ಅವಳಿ ನಗರದಲ್ಲಿ ಅಗಸ್ಟ್ 31 ರಿಂದ ಸೆಪ್ಟೆಂಬರ್‌ 11 ರವರೆಗೆ ಗಣೇಶ ಹಬ್ಬದ ಆಚರಿಸಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯಪಾನವನ್ನು ನಿಷೇಧಿಸಿ ಪೊಲೀಸ್ ಆಯುಕ್ತ ಲಾಭೂರಾಮ್ ಆದೇಶ ಹೊರಡಿಸಿದ್ದಾರೆ.

ಅ.30 ರಂದು ರಾತ್ರಿ 12 ಗಂಟೆಯಿಂದ ಸೆ. 1 ರ ಬೆಳಿಗ್ಗೆ 6 ಗಂಟೆವರೆಗೆ, ಸೆ.1 ರಂದು ರಾತ್ರಿ 12 ಗಂಟೆಯಿಂದ ಸೆ.3 ರ ಬೆಳಿಗ್ಗೆ 6 ಗಂಟೆವರೆಗೆ, ಸೆ.3 ರಂದು ರಾತ್ರಿ 12 ಗಂಟೆಯಿಂದ ಸೆ.5 ರ ಬೆಳಿಗ್ಗೆ 6 ಗಂಟೆವರೆಗೆ, ಸೆ.5 ರಂದು ರಾತ್ರಿ 12 ಗಂಟೆಯಿಂದ ಸೆ.07 ರ ಬೆಳಿಗ್ಗೆ 6 ಗಂಟೆವರೆಗೆ, ಸೆ.7 ರಂದು ರಾತ್ರಿ 12 ಗಂಟೆಯಿಂದ ಸೆ.9 ರ ಬೆಳಿಗ್ಗೆ 6 ಗಂಟೆವರೆಗೆ,
ಸೆ.9 ರಂದು ರಾತ್ರಿ 12 ಗಂಟೆಯಿಂದ ಸೆ.11 ರ ಬೆಳಿಗ್ಗೆ 6 ಗಂಟೆವರೆಗೆ ಸಂಪೂರ್ಣವಾಗಿ ಮದ್ಯ ತಯಾರಿಕೆ, ಮಾರಾಟ ಹಾಗೂ ಸಾಗಣಿಕೆಯನ್ನು ನಿಷೇಧಿಸಿಸಲಾಗಿದೆ. ಕ್ಲಬ್, ಹೊಟೇಲ್, ಬಾರ್, ಕೆಎಸ್ ಬಿಸಿಎಲ್ ಡಿಪೋ ಹಾಗೂ ಹೋಟೆಲ್‌ಗಳಲ್ಲಿರುವ ಬಾರ್‌ಗಳನ್ನು ಬಂದ್ ಮಾಡಬೇಕು. ಎಲ್ಲ ಅಬಕಾರಿ ಸನ್ನದು ಅಂಗಡಿಗಳನ್ನು ತೆರಯಕೂಡದು. ಸಾರ್ವಜನಿಕ ಶಾಂತತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಅಬಕಾರಿ ಇನ್ಸಪೆಕ್ಟರ್ ಹಾಗೂ ಉಪವಿಭಾಗ ಅಬಕಾರಿ ಅಬಕಾರಿ ಅಧೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21(2) ರನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!