ಹಾಡುಹಗಲೇ ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ

ಚಾಲಾಕಿ ಕಳ್ಳನೋರ್ವ ಹಾಡುಹಗಲೇ ಆಟೋದಲ್ಲಿದ್ದ ನಗದು ಹಾಗೂ ಪೆನ್ ಡ್ರೈವ್ ಕದ್ದು ಪರಾರಿಯಾಗಿರುವ ಘಟನೆ ನಗರದ ಗಬ್ಬೂರ ರಸ್ತೆಯಲ್ಲಿರುವ ಅಂಜುಮನ್ ಶಾದಿ ಹಾಲ ಹತ್ತಿರ ನಡೆದಿದ್ದು, ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಮ್ಮದ್ ಗೌಸ್ ಗೌಳಿ ಎಂಬಾತನಿಗೆ ಸೇರಿದ ಆಟೋ ಇದಾಗಿದ್ದು, ಆಟೋ ಚಾಲಕ ಟೀ ಕುಡಿಯಲಿಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಟೋದಲ್ಲಿದ್ದ 6,300 ರೂ. ನಗದು ಹಾಗೂ ಒಂದು ಪೆನ್ ಡ್ರೈವ್ ಕಳ್ಳತನ ಮಾಡಿದ್ದು, ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಸೆರೆಯಾಗಿದೆ.

ಈ ಕುರಿತಂತೆ ಆಟೋ ಚಾಲಕ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ .