Uncategorized

ಮೊಸಳೆ ಕಾಟದಿಂದ ಭಯಭೀತರಾದ ಕಲಘಟಗಿಯ ಗ್ರಾಮಸ್ಥರು

ಕಲಘಟಗಿ ತಾಲೂಕಿನ ಗ್ರಾಮಸ್ಥರ ನಿದ್ದೆಗೆಡಿಸಿದ ಮೊಸಳೆ

ಕಳೆದ ನಾಲ್ಕೈದು ದಿನಗಳಿಂದ ರೈತರ ಜಮೀನಿಗೆ ಎಂಟ್ರಿ ಕೊಟ್ಟ ಬೃಹದಾಕಾರದ ಮೊಸಳೆ

ಕಲಘಟಗಿ ತಾಲೂಕಿನ‌ ಗಳಗಿ ಹುಲಕೊಪ್ಪ‌ ಗ್ರಾಮಸ್ಥರಿಗೆ ಮನೆಮಾಡಿದ ಮೊಸಳೆ ಆತಂಕ

ಜಮೀನುಗಳ‌ ಮೂಲಕ‌ ಗ್ರಾಮದ ಕೆರೆಗೆ ಆಗಮಿಸಿರೋ ಮೊಸಳೆ

ಕಳೆದ‌ ನಾಲ್ಕೈದು ದಿನಗಳಿಂದಲೂ ಕೆರೆಯಲ್ಲೇ ಬೀಡು ಬಿಟ್ಟ ಮೊಸಳೆ

ಮೊಸಳೆ ಕಾಟದಿಂದಾಗಿ ನಿತ್ಯ ಜಮೀನುಗಳಿಗೂ ತೆರಳದೇ ಭಯಭೀತರಾಗಿರೋ ಗ್ರಾಮಸ್ಥರು

ಒಂದೆಡೆ ಬೃಹದಾಕಾರದ ಮೊಸಳೆ ಕೆರೆಯಲ್ಲಿ ಬೀಡುಬಿಟ್ಟಿದ್ದರೂ ಗಂಭೀರತೆ ತೆಗೆದುಕೊಳ್ಳದ ಅರಣ್ಯ ಇಲಾಖೆ

ಕೇವಲ ಕೆರೆಯ ಒಂದು ಭಾಗದಲ್ಲಿ ಬೇಲಿ ಹಾಕಿ‌ ಕೈತೊಳೆದುಕೊಂಡಿರೋ ಅರಣ್ಯ ಇಲಾಖೆಯ ಅಧಿಕಾರಿಗಳು

ಪ್ರತಿ ದಿನ‌ರಾತ್ರಿ ವೇಳೆ ಕೆರೆಯಿಂದ ಹೊರಬರುವ ಮೊಸಳೆಯಿಂದಾಗಿ ಗ್ರಾಮಸ್ಥರಲ್ಲಿ ಹೆಚ್ಚಾದ ಆತಂಕ

ಮೊಸಳೆಯ ಆತಂಕದಲ್ಲೇ ದಿನಕಳೆಯುತ್ತಿರೋ‌ ಗಳಗಿ ಹುಲಕೊಪ್ಪದ ಗ್ರಾಮಸ್ಥರು

ರಾತ್ರಿ ವೇಳೆ ಗ್ರಾಮಸ್ಥರಿಗೆ ಕಂಡಿರುವ ಬೃಹದಾಕಾರಾದ ಮೊಸಳೆ

ನಾಲ್ಕೈದು ದಿನಗಳಿಂದ‌ ಕೆರೆಯಲ್ಲೇ ಬೀಡು ಬಿಟ್ಟಿದ್ದರೂ ಕಾರ್ಯಾಚರಣೆಗೆ ಮುಂದಾಗದ ಅರಣ್ಯ ಇಲಾಖೆ ಅಧಿಕಾರಿಗಳು

ಅಧಿಕಾರಿಗಳ‌ ಬದಲಾಗಿ ತಾವೇ ಸ್ವತಃ ಮೊಸಳೆ ಕಾರ್ಯಾಚರಣೆಗೆ‌ ಮುಂದಾದ ಗ್ರಾಮಸ್ಥರು

ಅರಣ್ಯ ಅಧಿಕಾರಿಗಳ‌ ನಿರ್ಲಕ್ಷ್ಯ ಧೋರಣೆಗೆ ಗಳಗಿ ಹುಲಕೊಪ್ಪ ಗ್ರಾಮಸ್ಥರಲ್ಲಿ ಆಕ್ರೋಶ

ಶೀಘ್ರವೇ ಗಂಭೀರವಾಗಿ ಕಾರ್ಯಾಚರಣೆ ಮಾಡಿ‌ಮೊಸಳೆ‌ ಸೆರೆಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

Leave a Reply

Your email address will not be published. Required fields are marked *

error: Content is protected !!