ಅಂಗಡಿ ಮೇಲ್ಚಾವಣಿ ಮುರಿದು ಹಣ ಕಳವು ಮಾಡಿದ ಚಾಲಾಕಿ ಕಳ್ಳರು

ಹುಬ್ಬಳ್ಳಿ: ರಾತ್ರಿ ಕಳ್ಳರು ಕಿರಾಣಿ ಅಂಗಡಿಗೆ ಮೇಲ್ಛಾವಣಿ ಮುರಿದು ಅಂಗಡಿಯಲ್ಲಿದ್ದ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ಕಳವು ಮಾಡಿ ಪರಾರಿಯಾದ ಘಟನೆ ಹುಬ್ಬಳ್ಳಿ ಅನಂದ ನಗರದಲ್ಲಿ ನಡೆದಿದೆ.
ಸದಾಶಿವ ಸೋಮನಕೊಪ್ಪ ಎಂಬುವರಿಗೆ ಸೇರಿದ ಎ.ಕೆ.ಎಸ್ ಟ್ರೇಡರ್ಸ್ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿದೆ. ಸದಾಶಿವ ಸೋಮನಕೊಪ್ಪ ಅವರು ರಾತ್ರಿ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು.ಶುಕ್ರವಾರ ತಡರಾತ್ರಿ ಯಾರೋ ದುಷ್ಕರ್ಮಿಗಳು ಅಂಗಡಿಯ ಸಿಮೆಂಟಿನ ಮೇಲ್ಚಾವಣಿ ಮುರಿದು ಒಳ ನುಗ್ಗಿದ್ದಾರೆ. ನಂತರ ಅಂಗಡಿಯಲ್ಲಿದ್ದ ಕ್ಯಾಶ್ ಡ್ರಾವರ್ ಒಡೆದು ಅದರಲ್ಲಿದ್ದ ಸುಮಾರು ಇಪ್ಪತ್ತು ಸಾವಿರ ರೂ. ಹಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇನ್ನು ಈ ಕುರಿತು ಅಂಗಡಿಯ ಮಾಲಿಕ ಸದಾಶಿವ ಹಳೆ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ