ಆಸ್ತಿ ವಿಚಾರಕ್ಕೆ ಮರಾಠಾ ಕಾಲೋನಿಯಲ್ಲಿ ಫಕೀರಪ್ಪನ ಕೊಲೆ

ಆಸ್ತಿ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡದ ಮರಾಠ ಕಾಲೋನಿಯ ಮುಖ್ಯರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.ಫಕೀರಪ್ಪ ಕೊಲೆಯಾದ ವ್ಯಕ್ತಿಯಾಗಿದ್ದು ಧಾರವಾಡದ ಹೆಬ್ಬಳ್ಳಿ ಗ್ರಾಮದ ನಿವಾಸಿಯಾಗಿದ್ದು ಆಸ್ತಿ ವಿಚಾರಕ್ಕೆ ಅವರ ಅಣ್ಣ ತಮ್ಮಂದಿರರು ಹತ್ಯೆಯನ್ನು ಮಾಡಿದ್ದಾರೆ ಎನ್ನಲಾಗಿದೆ.ಮುಖ್ಯ ರಸ್ತೆಯಲ್ಲಿಯೇ ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆಯನ್ನು ಮಾಡಿ ಭೀಕರವಾಗಿ ಕೊಲೆಯನ್ನು ಮಾಡಲಾಗಿದ್ದು ಇನ್ನೂ ಈ ಒಂದು ವಿಚಾರವನ್ನು ತಿಳಿದ ಧಾರವಾಡದ ಉಪನಗರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿ ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.ಇನ್ನೂ ಧಾರವಾಡದಲ್ಲಿ ವಾಸಿಸುತ್ತಿದ್ದನು ಫಕೀರಪ್ಪನು.ಸಂಜೆ ಇವರ ಅಣ್ಣ ತಮ್ಮಂದಿರರು ನಗರಕ್ಕೆ ಆಗಮಿಸಿ ಫಕೀರಪ್ಪನನ್ನು ಹಿಂಬಾಲಿಸಿ ಕತ್ತಲಾಗುತ್ತಿದ್ದಂತೆ ಮರಾಠ ಕಾಲೋನಿಯ ಮುಖ್ಯರಸ್ಥೆಯಲ್ಲಿ ಹೋಗುತ್ತಿರುವಾಗ ಹತ್ಯೆಯನ್ನು ಮಾಡಿರುವ ಮಾಹಿತಿ ಉಪನಗರ ಪೊಲೀಸರಿಗೆ ಲಭ್ಯವಾಗಿದ್ದು ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲವನ್ನು ಬೀಸಿದ್ದು ಕೊಲೆಗೆ ನಿಖರವಾದ ಕಾರಣವನ್ನು ಹುಡುಕುತ್ತಿದ್ದಾರೆ.