ಅಂತರ ಜಿಲ್ಲಾ ಮನೆ ಕಳ್ಳನ ಬಂಧನ ೧.೮೦ ಲಕ್ಷ ಮೌಲ್ಯದ ಬಂಗಾರದ ಆಭರಣ ವಶ

ಕುಖ್ಯಾತ ಅಂತರ ಜಿಲ್ಲಾ ಮನೆ ಕಳ್ಳನನ್ನು ಬಂಧಿಸುವಲ್ಲಿ ಇಂದು ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಬು. ಅರಳಿಕಟ್ಟಿ ಗ್ಯಾನದಲ್ಲಿ ಕಳೆದ ಕೆಲವ ದಿನಗಳ ಹಿಂದೆ ಕೀಲಿ ಹಾಕಿದ ಮನೆಯನ್ನು ಟಾರ್ಗೆಟ್ ಮಾಡಿ ಕೀಲಿ ಮುರಿದು ಬಿರುವಿನಲ್ಲಿ ಇದ್ದ ಬಂಗಾರ ಬೆಳ್ಳಿ ಕಳ್ಳತನ ಮಾಡಿ ಪರಾರಿ ಆಗಿದ್ದ ಚಾಲಾಕಿ ಕಳ್ಳನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದು, ಬಂಧಿತನಿಂದ 1.80.00 ರೂ. ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಬಂದಿತ ಆರೋಪಿಯು ೩೪ ವರ್ಷದ ಬಳ್ಳಾರಿ ನಿವಾಸಿಯಾದ ಪರುಶುರಾಮ ಬಸವಂತಪ್ಪಾ ಚಂದಳ್ಳಿ ಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ಧಾರವಾಡ ಎಸ್.ಪಿ ಗೋಪಾಲ ಬ್ಯಾಕೋಡ ಹಾಗೂ ಡಿ.ಎಸ್.ಪಿ ಎಸ್ ಎಮ್ ನಾಗರಾಜ ರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಮ್.ಆರ್.ಚನ್ನಣ್ಣವರ ರವರ ನೇತೃತ್ವದಲ್ಲಿ ಸಚೀನ ಆಲಮೇಲಕರ ಪಿ.ಎಸ್.ಐ (ಎಲ್.& ಓ), ಶ್ರೀಮತಿ ಚಾಮುಂಡೇಶ್ವರಿ ಡಿ (ಮ.ಪಿ.ಎಸ್.ಐ) ಹಾಗೂ ಸಿಬ್ಬಂದಿ ಜನರಾದ ಎ ಎಸ್ ಐ. ಎನ್.ಎಮ್.ಹೊನ್ನಪ್ಪನವರ, ವಾಯ್.ಜಿ.ಶಿವಮ್ಮನವರ ಎ.ಎಸ್.ಐ, ಎ.ಎ. ಕಾಕರ , ಚನ್ನಪ್ಪ ಬಳ್ಕೊಳ್ಳಿ ಹಾಗೂ ಮಾಂತೇಶ ಮದ್ದೀನ.ಗಿರೀಶ ತಿಪ್ಪಣ್ಣವರ.ವಿಠಲ ಡಂಗನವರ ರವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡು ಪ್ರಕರಣಗಳನ್ನು ಬೇದಿಸಿದ್ದಾರೆ. ಇವರ ಕಾರ್ಯವೈಖರಿಯನ್ನು ಧಾರವಾಡ ಜಿಲ್ಲಾ ಎಸ್ ಪಿ ಅವರು ಶ್ಲಾಘಿಸಿದ್ದಾರೆ.