Uncategorized

ನಮ್ಮದು ಧರ್ಮಯುದ್ದ. ನಿಮ್ಮ ಕಾಯಕ ಬಿಟ್ಟು ಬರಬೇಡಿ,ಯಾರಿಗೆ ಶಕ್ತಿ ಇದೆ ಅವರು ಬನ್ನಿ‌

ನಮ್ದು ಧರ್ಮಯುದ್ದ. ಧರ್ಮದ ಹಾದಿಯಲ್ಲಿ ಪ್ರಚಾರ ಸಾಗಿದೆ.
ಹುಬ್ಬಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸ್ವಾಮೀಜಿ ಜೋಶಿ ಇವರಿಗೆ ತಾಕತ್ ಇಲ್ಲದೆ ಇರೋ ಕಾರಣಕ್ಕೆ ಮೋದಿ ಮುಖ ನೋಡಿ ವೋಟ್ ಹಾಕಿ ಅಂತಾರೆ. ಎಂದು
ಪರೋಕ್ಷವಾಗಿ ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇಡೀ ಧಾರವಾಡ ಜಿಲ್ಲೆಯಲ್ಲಿ ಕ್ಯಾಮೆರಾ ತಗೆದುಕೊಂಡು ಹೋಗಿ. ನೋಡಿ ಏನ ಕೆಲಸ ಮಾಡಿದಾರೆ ಅನ್ನೋದ ಗೊತ್ತಾಗತ್ತೆ. ಅದೆ ಕಾರಣಕ್ಕೆ ಮೋದಿ ಮುಖ ನೋಡಿ ವೋಟ್ ಹಾಕಿ ಅಂತಾರೆ ಎಂದ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.


ಚುನಾವಣೆ ಪ್ರಚಾರಾರ್ಥವಾಗಿ ನಾವು ಸಂಘಟನೆ ಮಾಡ್ತೀದಿವಿ..
ಇವತ್ತು ಮುಸ್ಲಿಂ ಗುರುಗಳ ಮನೆಗೆ ಬಂದಿದ್ವಿ..
ನಮ್ಮ ಮಠ ಭಾವೈಕ್ಯತೆಯ ಮಠ ಆಗಿದೆ. ಹಾಗೆ ಧಾರವಾಡ ಮತ ಕ್ಷೇತ್ರದಲ್ಲಿ ಮುಸ್ಲಿಂ, ಬ್ರಾಹ್ಮಣ ಸಮುದಾಯ ಒಂದಾಗ್ತಿದೆ.
ಇದು ಇಡೀ ದೇಶಕ್ಕೆ ಒಂದು ದೊಡ್ಡ ಸಂದೇಶ ಸಿಗಲಿದೆ ಎಂದರು.


ಇವತ್ತು ನಾವೆಲ್ಲರೂ ಒಂದಾಗಿ ಹೋಗಬೇಕಿದೆ.ಗುರುಗಳ ಬೆಂಬಲ ನಮಗೆ ಆನೆ ಬಲ ಬಂದಂತಾಗಿದೆ..
ನಮ್ಮ ಚುನಾವಣೆ ಸಕ್ಸಸ್ ಅಗಿದೆ ಎಂದ ದಿಂಗಾಲೇಶ್ವರ ಸ್ವಾಮೀಜಿ. ನಾವು ಮಠಾಧೀಶರನ್ನು ಭೇಟಿ ಮಾಡಿ ಮುಗಿಸಿದ್ದೇವೆ. ಎಲ್ಲ ಸಮಾಜದ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದೇವೆ.

ಇದು ನನ್ನ ಚುನಾವಣೆ ಅಲ್ಲ, ಧಾರವಾಡ ಜಿಲ್ಲೆಯ ಮತದಾರರ ಚುನಾವಣೆ ಅಂತಾ ಹೇಳಿ ಇನ್ನು ತಾವು ಹುಬ್ಬಳ್ಳಿಯಲ್ಲಿ ಮನೆ ಮಾಡ್ತೀದಿನಿ ಎಂದ ದಿಂಗಾಲೇಶ್ವರ ಸ್ವಾಮೀಜಿ ಮಾಧ್ಯಮದ ಮುಂದೆ ಮನೆ ಬಗ್ಗೆ ತಿಳಿಸಿದರು.

ನಾಳೆ ತಾವು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ನಾಮ‌ಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗ್ತಾರೆ ಎಂದು ಸಾರ್ವಜನಿಕರಿಗೆ ಹಾಗು ತಮ್ಮ ಭಕ್ತರಿಗೆ ಒಂದು ಸಂದೇಶ ರವಾನಿಸಿದ್ದು.

ನಿಮ್ಮ ಕಾಯಕ ಬಿಟ್ಟು ಬರಬೇಡಿ,ಯಾರಿಗೆ ಶಕ್ತಿ ಇದೆ ಅವರು ಬನ್ನಿ‌ ಅಂದರು. ಇನ್ನು ಟೌನ್ ಹಾಲ್ ನಿಂದ ಮೆರವಣಿಗೆ ಮೂಲಕ ನಾಮ‌ಪತ್ರ ಸಲ್ಲಿಕೆ ಮಾಡ್ತೀನಿ. ನಮ್ದು ಶಕ್ತಿ ಪ್ರದರ್ಶನ ,ಅಲ್ಲ ಆದರ್ಶವಾಗಿ ನಾಮ ಪತ್ರ ಸಲ್ಲಿಕೆ ಮಾಡ್ತೀವಿ.

ನಾಳೆ ಮುಸ್ಲಿಂ ಗುರುಗಳು,ರೈತ ಸಂಘದ ಅಧ್ಯಕ್ಷರು,ಸೇರಿ ಅನೇಕ ಸ್ವಾಮೀಜಿ ಗಳು ಇರ್ತಾರೆ. ಆದ್ರೆ
ರಾಜಕಾರಣಿಗಳು ಯಾರೂ ಇರಲ್ಲ,ರಾಜಕೀಯೇತರ ಜನ ಒರ್ತಾರೆ ಎಂದ ದಿಂಗಾಲೇಶ್ವರ ಸ್ವಾಮೀಜಿಗಳು ತಿಳಿಸಿದ್ದು.
ಇದು ಸ್ವಾಭಿಮಾನದ ಚುನಾವಣೆ ಅಂದರು.

ಸರ್ಕಾರದ ಸಮಯವೇ ನಮ್ಮ ಮೂಹೂರ್ತ ಎಂದು.ನಾವು ದುಡ್ಡು ಕೊಟ್ಟಿದ್ರೆ ಜನ ಇಷ್ಟು ಅಂತಾ ಹೇಳಬಹುದು ‌ ನಾವ ಯಾರಿಗೂ ದುಡ್ಡು ಕೊಟ್ಟು ಕರೆಯಲ್ಲ ಎಲ್ಲರು ಅಭಿಮಾನದಿಂದ ನನ್ನ ಜೊತೆಯಲ್ಲಿ ಬರುತ್ತಿದ್ದಾರೆ . ನಾನು ಯಾರ ಮಾತಿಗು ಬಗ್ಗಲ್ಲಾ ಆದ್ರೆ ನನ್ನ ನಿರ್ಧಾರ ಅಚಲ ಎಂದಿದ್ದಾರೆ.

ಯಡಿಯೂರಪ್ಪ ಪ್ರಕಾರ ನಮ್ಮದು ದುಸ್ಸಾಹಸ,ಅಂದ್ರೆ ನಮ್ಮ ಪ್ರಕಾರ ಸಾಹಸ ಆಗಿದೆ ಜೋಶಿ ಅವರ ನಾಮಪತ್ರ ಸಲ್ಲಿಸಲು ಬಂದವರನ್ನೆ ಜೋಶಿ ಅವರು ತುಳದಿದ್ದಾರೆ. ಅವರ ನಾಮಪತ್ರ ಸಲ್ಲಿಸಲು ಮೂರು ಜನ ಮಾಜಿ ಮುಖ್ಯಮಂತ್ರಿಗಳು ಬಂದಿದ್ದಾರೆ.


ಇವರ ಸೋಲು ಖಚಿತವಾಗಿ ಮೂರು ಜನರನ್ನು ಕರಸಿದ್ದಾರೆ..
ಅವರನ್ನು ನೋಡಿದ್ರೆ ನನಗೆ ಪಾಪ ಅನಸತ್ತೆ..ಅನಿವಾರ್ಯತೆಗೆ ಹೋಗಿದ್ದಾರೆ ಎಂದ ದಿಂಗಾಲೇಶ್ವರ ಸ್ವಾಮೀಜಿ..
ಜೋಶಿ ಅವರ ನಾಮಪತ್ರ ಸಲ್ಲಿಸಲು ಬಂದ 90 ,ರಷ್ಟು ಜನ ಜೋಶಿ ಅವರಿಂದ ತುಳಿತಕ್ಕೆ ಒಳಗಾದವರು ಎಂದು ಮಾತಿನ ಉದ್ದಕ್ಕು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!