ಮೃತ ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿ ಬಾಲಕಿಯ ಸಹೋದರಿಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡ ಶ್ರೀಗಂಧ ಶೆಟ್…..

ಹುಬ್ಬಳ್ಳಿಯಲ್ಲಿ ನಡೆದ ಬಾಲಕಿ ಹತ್ಯೆ ಪ್ರಕರಣ ಕುರಿತಂತೆ ಮಗಳನ್ನು ಕಳೆದುಕೊಂಡ ಪೋಷಕರಿಗೆ ಕೆಜಿಪಿ ಫೌಂಡೇಶನ್ ನರೆವಾಗಿದೆ.ಹೌದು ಬಾಲಕಿ ಕುಟುಂಬಕ್ಕೆ ವಿವಿಧ ಸಂಘ ಸಂಸ್ಥೆಗಳಿಂದ ನೆರವಿನ ಹಸ್ತ ಹರಿದು ಬರುತ್ತಿದ್ದರೆ ಇತ್ತ ಕೆಜಿಪಿ ಫೌಂಡೇಶನ್ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.ಬಾಲಕಿಯ ಮನೆಗೆ ಕೆಜೆಪಿ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ನೇತ್ರತ್ವದಲ್ಲಿನ ಟೀಮ್ ಭೇಟಿ ನೀಡಿ ಮಗಳನ್ನು ಕಳೆದುಕೊಂಡಿರುವ ಪೋಷಕರಿಗೆ ಸಾಂತ್ವನ ಹೇಳಿದರು.ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯವನ್ನು ತುಂಬಿದರು ಫೌಂಡೇಶನ್ ಸದಸ್ಯರು.ಅರ್ಧ ಗಂಟೆಗಳ ಕಾಲ ನಗರದಲ್ಲಿನ ವಿಶ್ವೇಶ್ವರ ನಗರದಲ್ಲಿನ ಬಾಲಕಿಯ ನಿವಾಸದಲ್ಲಿ ಪೋಷಕರೊಂದಿಗೆ ಕುಳಿತುಕೊಂಡ ಶ್ರೀಗಂಧ ಶೇಟ್ ಸಾಂತ್ವನ ಹೇಳಿ ಆತ್ಮಸ್ಥೈರ್ಯವನ್ನು ತುಂಬಿದರು.ಇದೇ ವೇಳೆ ಕುಟುಂಬಕ್ಕೆ ಸಹಾಯ ಹಸ್ತವನ್ನು ಚಾಚಿದರು ಕೆಜೆಪಿ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ .
ಮೃತ ಬಾಲಕಿಯ ಸಹೋದರಿ ಅಂಗವಿಕಲತೆಯಿಂದ ಬಳಲುತ್ತಿದ್ದು ಸಹಾಯ ಹಸ್ತವನ್ನು ಚಾಚಿದರು.ಬಾಲಕಿಯ ಸಂಪೂರ್ಣವಾದ ಶೈಕ್ಷಣಿಕ ಜಾವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಕೆಜಿಪಿ ಫೌಂಡೇಶನ್.ಇದೇ ವೇಳೆ ಕೆಜೆಪಿ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ಮಾತನಾಡಿ ಬಿಹಾರಿ ಮೂಲದ ವ್ಯಕ್ತಿ ಬಾಲಕಿ ಹತ್ಯೆ ಮಾಡಿದ್ದ ಅವರ ತಂದೆ -ತಾಯಿಯನ್ನು ಮಾತನಾಡಿಸಲು ಬಂದೆ ಅವರ ಕಣ್ಣೀರು ನೋಡಿ ಬಹಳ ಸಂಕಟ ಆಗ್ತಿದೆ ನಮ್ಮ ಫೌಂಡೇಶನ್ ನಿಂದ ಬಾಲಕಿಯ ಸಹೋದರಿಯ ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಂಡಿದ್ದೇವೆ ಎಂದರು.ಮೃತ ಬಾಲಕಿಯ ಸಹೋದರಿಯ ವಿದ್ಯಾಭ್ಯಾಸ ಸೇರಿ ಸಂಪೂರ್ಣ ಜವಾಬ್ದಾರಿ ನಾವು ತೆಗೆದುಕೊಂಡಿದ್ದೇವೆಅವರು ಯಾವುದೇ ಶಾಲೆ ಆಗಲಿ ಯಾವುದೇ ವ್ಯಾಸಂಗಕ್ಕೂ ನಾವು ಅದರ ಖರ್ಚು ನೋಡಿಕೊಳ್ತೇವೆ.ಕುಟುಂಬಸ್ಥರು ಈ ನೋವಿನಿಂದ ಹೊರ ಬಂದ ಮೇಲೆ ಅಗ್ರಿಮೆಂಟ್ ಮಾಡಿಕೊಳ್ತೀವೆ.ಆ ಕುಟುಂಬದಲ್ಲಿ ನಾನು ಒಬ್ಬ ಆಗಿ ನಿಂತಿದ್ದೇನೆ ಆ ತಾಯಿ-ತಂದೆ ದುಃಖ ನಾವು ತಗೋಳೋಕೆ ಆಗಲ್ಲ ಎಂದು ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಹೇಳಿದರು ಇದರೊಂದಿಗೆ ಕುಟುಂಬಕ್ಕೆ ಆಸರೆಯಾಗಿದ್ದಾರೆ ಕೇವಲ ಮನೆಗೆ ಬಂದು ಕಣ್ಣೀರು ಒರೆಸುವುದು ಅಷ್ಟೇ ಅಲ್ಲದೇ ಕುಟುಂಬಕ್ಕೆ ಸಾಂತ್ವನ ಹೇಳಿ ಜೊತೆಗೆ ಮೃತ ಸಹೋದರಿಯ ಸಂಪೂರ್ಣವಾದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಕೆಜಿಪಿ ಫೌಂಡೇಶನ್ ಸಾಮಾಜಿಕ ಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.