ಈಜುಕೋಳದಲ್ಲಿ ಮೃತ ಪಟ್ಟ ಯುವಕ. ಸಿ ಸಿ ಟಿವಿಯಲ್ಲಿ ದೃಶ್ಯ ಸೆರೆ

ಹುಬ್ಬಳ್ಳಿ: ಮೊದಲೇ ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಹೆಚ್ಚಾಗುತ್ತಿವೆ. ಆದರೆ ಹುಬ್ಬಳ್ಳಿಯಲ್ಲಿ ಈಜುಕೋಳದ ಆಡಳಿತ ಮಂಡಳಿಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಆಡಳಿತ ಮಂಡಳಿಯ ನಿಷ್ಕಾಳಜಿಯಿಂದ ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆಯ ವೀಡಿಯೋ ವೈರಲ್ ಆಗಿದೆ.
ಹುಬ್ಬಳ್ಳಿಯ ಆಕ್ಸ್‌ಫರ್ಡ್ ಕಾಲೇಜು ಹತ್ತಿರದ ಅಮನ ಅಪಾರ್ಟ್ಮೆಂಟನ ನಿವಾಸಿ 32ವಯಸ್ಸಿನ ಶಿವರಾಜ ಶಿವಪುತ್ರಪ್ಪ ದಾಣಿಗಲ್ ಮೃತ ದುರ್ದೈವಿಯಾಗಿದ್ದು, ಈತ ನವೀನ್ ಪಾರ್ಕ್ ಅಸೋಸಿಯೇಷನ್ ನಿರ್ವಹಣೆಯ ಎಮ್.ಆರ್.ಅಕಾಡೆಮಿ ಸ್ವಿಮಿಂಗ್ ಪೂಲ್’ನಲ್ಲಿ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜು.20 ರಂದು ಈಜುಕೋಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ರಾಜೇಶ್ ಶೆಟ್ಟಿ, ಮಿಥುನ್ ಎಮ್.ಕೆ ಹಾಗೂ ಮ್ಯಾನೇಜರ್’ಗಳ ನಿಷ್ಕಾಳಜಿವತಿಯಿಂದ ರಾಜೇಶ್’ನಿಗೆ ಯಾವುದೇ ಸುರಕ್ಷಿತ ಸಾಧನಗಳನ್ನು ನೀಡದೇ ಈಜುಕೊಳ ಕ್ಲಿನಿಂಗ್ ಕೆಲಸಕ್ಕೆ ಹಚ್ಚಿದ್ದರು.ಆದರೆ ಶಿವರಾಜ್ ಈಜುಕೊಳವನ್ನು ಆ್ಯಸಿಡ್ ಹಾಕಿ, ವಿದ್ಯುತ್ ಚಾಲಿತ ಗನ್ ದಿಂದ ಸ್ವಚ್ಛಗೊಳಿಸುವಾಗ ವಿದ್ಯುತ್ ಶಾಕ್ ದಿಂದ ಮೃತಪಟ್ಟಿದ್ದನೆ.ಇನ್ನು ವಿದ್ಯುತ್ ತಗುಲಿ ದುರಂತದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.