ರಾಜಸ್ಥಾನ ದಾಬಾ ಮೇಲೆ ದಾಳಿ 40 ಸಾವಿರ ಮೌಲ್ಯದ ಅಪೀಮು ವಶ

ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿಯ ಹುಬ್ಬಳ್ಳಿ-ಕಾರವಾರ ರಾಜ್ಯ ಹೆದ್ದಾರಿಯ ರಾಜಸ್ಥಾನ ದಾಬಾದಲ್ಲಿ ಅಕ್ರಮವಾಗಿ ಅಫೀಮು ಸಂಗ್ರಹವಿಟ್ಟುಕೊಂಡುಮಾರಾಟ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಿ, 40 ಸಾವಿರ ಬೆಲೆಬಾಳುವ 664 ಗ್ರಾಮ ಆಫೀಮು ವಶಪಡಿಸಿಕೊಳ್ಳಲಾಗಿದೆ.

ನೂರು ಉಲ್ಲ, ಪ್ರವೀಣ್ ಕುಮಾರ, ಸಮುದ್ರ ಖಾನ್, ಗೋವಿಂದ ಗೆವರ್, ಮುಖೇಶ್ ಕುಮಾರ ಬಂಧಿತ ಆರೋಪಿಗಳಾಗಿದ್ದು, ದಾಬಾ ಮಾಲೀಕ ಭಗೀರಥ ಹಾಗೂ ಆತನ ಮಗ ಪರಾರಿಯಾಗಿದ್ದಾರೆ.

ಧಾರವಾಡ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಮಾಡಲು ಪಣ ತೊಟ್ಟಿರುವ ಪೊಲೀಸ್ ಇಲಾಖೆ ಧಾರವಾಡ ಎಸ್ಪಿ ಡಾ.ಗೋಪಾಲ್ ಬ್ಯಾಕೋಡ್ ಹಾಗೂ ಎನ್.ವ್ಹಿ.ಭರಮನಿ ಮಾರ್ಗದರ್ಶನದಲ್ಲಿ ಕಲಘಟಗಿ ಪೊಲೀಸ್ ಠಾಣೆಯ ಪೋಲಿಸರು ಹಾಗೂ CEN ಪೊಲೀಸರು ಖಚಿತ ಮಾಹಿತಿ ಮೇರೆಗೆ ಜಂಟಿಯಾಗಿ ರಾಜಸ್ಥಾನ ದಾಬಾ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ಕಾಲಕ್ಕೆ ಡಾಬಾದಲ್ಲಿ ಅಫೀಮು ದೊರೆತ್ತಿದ್ದು, ಈಗಾಗಲೇ ಆರು ಜನರನ್ನು ಬಂಧಿಸಿರುವ ಪೊಲೀಸರು ಎಲ್ಲಿಂದ ಅಫೀಮು ಸರಬರಾಜು ಆಗುತ್ತಿತ್ತು. ಯಾರು ಯಾರು ಭಾಗಿಯಾಗಿದ್ದಾರೆಂಬ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ CEN ಇನ್ಸ್ಪೆಕ್ಟರ್ ಮುರುಗೇಶ ಟಿ.ಎಸ್, ಪಿಎಸ್ಐ ಲಕ್ಷ್ಮಿ ದೇಗಿನಾಳ, ಕರವೀರಪ್ಪನವರ, ಸಿಬ್ಬಂದಿಗಳಾದ ಉಲ್ಲಾಸ್, ಎಚ್.ಬಿ.ಐಹೊಳೆ, ಎಮ್.ಎನ್.ಅಷ್ಟಗಿ, ರಮೇಶ ಕಟ್ಟಿ, ನಿಂಗಪ್ಪ ಕರಜಗಿ, ಮಹಾಂತೇಶ ನಾನಾಗೌಡರ. ಜವಳಿ. ಮೆಟ್ಟಿನ. ಎಸ್ ಎಮ್ ಸೋಗಿ. ಹಪ್ಪಳಿ. ಬೋಗುರ್ . ಸೇರಿದಂತೆ ಮುಂತಾದವರು ಇದ್ದಾರೆ.
ಇವರ ಕಾರ್ಯಾಚರಣೆಗೆ ಮೆಚ್ಚಿ ತಂಡಕ್ಕೆ ಎಸ್ ಪಿ ಗೋಪಾಲ ಬ್ಯಾಕೋಡ ಅವರು ಬಹುಮಾನ ಘೋಷಿಸಿದ್ದಾರೆ.