ಕೇವಲ 24 ಗಂಟೆಗಳಲ್ಲಿ ಚಾಲಾಕಿ ಕಳ್ಳರನ್ನು ಬಂಧಿಸಿದ ಉಪನಗರ ಪೊಲೀಸರು

ಹುಬ್ಬಳ್ಳಿಯ ಉಪನಗರ ಪೋಲೀಸರ ಕಾರ್ಯಾಚರಣೆಗೆ ಸಿಕ್ಕಿ ಬಿದ್ದ ಕಳ್ಳರು ಉಂಡ ಮನೆಗೆ ಕನ್ನ ಹಾಕಿದ ಚಾಲಾಕಿ ಕಳ್ಳರು

ಉಪನಗರ ಪೊಲೀಸರು ಕೇವಲ 24 ಗಂಟೆಯಲ್ಲಿ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಪನಗರ ಠಾಣೆಯ ವ್ಯಾಪ್ತಿಯ ದಾಜಿಬಾನಪೇಟೆಯಲ್ಲಿರುವ ಗ್ಯಾಸ್ ಡಿಸ್ಟ್ರಿಬ್ಯೂಟರ್ ಏಜೆನ್ಸಿವೊಂದರಲ್ಲಿ ಜು.13 ರಂದು ಬರೋಬ್ಬರಿ 5.37.900 ರೂ ನಗದನ್ನು ಯಾರೋ ಕಳ್ಳರು ಕದ್ದು ಪರಾರಿಯಾಗಿದ್ದರು.

ಈ ಕುರಿತು ಏಜೆನ್ಸಿಯವರು ಉಪನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ಶಿವಪ್ರಕಾಶ್ ನಾಯಕ ಹಾಗು ಉಪನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಯಲ್ಲಿ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಬಂಧಿತರನ್ನು ಕೈಲಾಸ ಬಿಷ್ಟೋಯಿ, ಗಂಗಾವಿಷ್ಣು ಬಿಷ್ಟೋಯಿ ಎಂದು ಗುರುತಿಸಲಾಗಿದೆ. ಇವರು ಅದೇ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇವರಿಂದ ಕಳ್ಳತನದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಎಸಿಪಿ ಶಿವಪ್ರಕಾಶ್ ನಾಯಕ ಇವರ ಮಾರ್ಗ ದರ್ಶನದಲ್ಲಿ ಉಪನಗರ ಪೊಲೀಸ ಇನ್ಸಪೆಕ್ಟರ ಎಮ್ ಎಸ್ ಹುಗಾರ ಅವರ ನೇತ್ರತ್ವದಲ್ಲಿ ಪಿಎಸಐ ಆದ ಮಲ್ಲಿಕಾರ್ಜುನ ಹೊಸುರ .ಸಿಬ್ಬಂದಿಗಳಾದ ಅರುಣ ಡೊಳ್ಳಿನ. ರವಿ ಯಳವತ್ತಿ.ತರುಣ ಗೇಲ್. ಶೀನಿವಾಸ ಯರಗುಪ್ಪಿ. ರೇಣು ಸಿಕ್ಕಲಗೇರ .ನಾಗರಾಜ ಗುಡಿಮನಿ ಅರೋಪಿಗಳನ್ನು ಬಂದಿಸಿದ್ದಾರೆ. ಉಪನಗರ ಪೊಲೀಸರ ಕಾರ್ಯವನ್ನು ಹು-ಧಾ ಪೋಲಿಸ್ ಆಯಕ್ತ ಎನ್.ಶಶಿಕುಮಾರ್ ಪ್ರಶಂಶಿಸಿದ್ದಾರೆ.