ಸಿ ಇ ಎನ್ ಕ್ರೈಂ ಪೊಲೀಸರ ಭರ್ಜರಿ ಭೇಟೆ ೨೦ ಕೆಜಿ ಗಾಂಜಾ ಸಹಿತ ಇಬ್ಬರು ಆರೋಪಿಗಳ ಬಂಧನ

ಅಂತರ ರಾಜ್ಯ ಗಾಂಜಾ ಮಾರಾಟಾ ಮಾಡುತಿದ್ದ ಗಾಂಜಾ ಮಾರಾಟ ಗಾರನನ್ನು ಹುಬ್ಬಳಿಯಲ್ಲಿ ಸಿ ಇ ಎನ ಕ್ರೈಂ ಪೊಲೀಸರು ಬಂದಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ರೈಲ್ವೆ ಆಸ್ಪತ್ರೆಯ ಮುಂದೆ ಅನಧೀಕೃತವಾಗಿ ಗಾಂಜಾ ವನ್ನು ಮಾರಾಟ ಮಾಡಲು ಬಂದಿದ್ದ ಆಂದ್ರ ಪ್ರದೇಶದ ಗೋಮಂಗಿ ವಿನೋದ. ಮತ್ತು ಗೋಮಂಗಿ ಶಂಕರ ಇವರಿಂದ 4 ಲಕ್ಷ 8 ಸಾವಿರದ 100 ರೂಪಾಯಿಯ 20 ಕಿಲೋ 405 ಗ್ರಾಂ ಗಾಂಜಾ ಸಮೆತ ಎರಡು ಮೊಬೈಲನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂದಿಸಿ ವಿಚಾರಣೆ ನಡೆಸಿದಾಗ ಆರೋಪಿಯು ತಾನು ಗಾಂಜಾ ಮಾರಾಟ ಮಾಡುವ ಸಲುವಾಗಿ ಹುಬ್ಬಳ್ಳಿ ಗೆ ಬಂದಿದ್ದಾಗಿ ಒಪ್ಪಿಕೊಂಡಿರುತ್ತಾನೆ .

ಇನ್ನು ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜಿರು ಪಡಿಸಿದ್ದು ನ್ಯಾಯಾಂಗ ಬಂಧನ ವಿದಿಸಿದ್ದಾರೆ.

ಪೊಲೀಸ ಆಯುಕ್ತರು. ಡಿಸಿಪಿ ಶಾಹೀಲ ಬಾಗ್ಲಾ .ಗೋಪಾಲ ಬ್ಯಾಕೋಡ ಹಾಗು ಎಸಿಪಿ ಬಾಬಾಸಾಬ ಹುಲ್ಲಣ್ಣವರ ಮಾರ್ಗದರ್ಶನದಲ್ಲಿ ಸಿ ಇ ಎನ್ ಕ್ರೈಂ ಇನ್ಸಪೆಕ್ಟರ ಎಮ್ ಎಸ ಹೂಗಾರ ಅವರ ನೇತೃತ್ವದಲ್ಲಿ ಪಿ ಎಸ ಐ ರಮೇಶ ಪಾಟೀಲ್ ಮತ್ತು ಅನ್ನಪೂರ್ಣ ಇವರ ಜೊತೆಯಲ್ಲಿ ಸಿಬ್ಬಂದಿಗಳಾದ ಸಿ ಎಮ್ ಕಂಬಾಳಮಠ. ಎಪ್ ಐ ಸುನಗಾರ. ಎಸ್ ಎಮ್ ಕುರಹಟ್ಟಿ. ರವಿ ಕೋಳಿ. ಗಿರೀಶ್ ಬಡಿಗೇರ . ಮೋಹನ್ ಈಳಿಗೇರ ಈ ಒಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು ಇವರ ಕಾರ್ಯಾಚರಣೆ ಗೆ ಮೆಚ್ಚಿ ಪೊಲೀಸ ಆಯುಕ್ತರು ಬಹುಮಾನ ಘೋಷಿಸಿದ್ದಾರೆ