Uncategorized

ರೆಡ್ಡಿಯನ್ನು ಲಾಕ ಮಾಡಿದ ಶಹರ ಠಾಣೆ ಪೊಲೀಸರು. 3 ಲಕ್ಷ ಮೌಲ್ಯದ 5 ಬೈಕ ವಶ…

ಹುಬ್ಬಳ್ಳಿ ಲ್ಯಾಮಿಂಗ್ಟನ್ ರೋಡ ಮಹಾದೇವ ಸಿಲ್ಕ & ಸಾರೀಜ ಅಂಗಡಿ ಮುಂದೆ ನಿಲ್ಲಿಸಿದ ಬಜಾಜ ಸಿಟಿ-100 ಬೈಕ್  ರಾತ್ರಿ ವೇಳೆಯಲ್ಲಿ ಕಳ್ಳತನವಾದ ಬಗ್ಗೆ ಕೆ.ಜಿ.ಪಿ ಜುವೇಲರಿ ಮಹಾದೇವಿ ಸಿಲ್ಕ & ಸಾರೀಸದ ಮ್ಯಾನೇಜರ ಶ್ರೀ ಕಮಲಾಕರ ದೈವಜ್ಞ ಇವರು ನೀಡಿದ ದೂರಿನ ಮೇರೆಗೆ. ಹುಬ್ಬಳ್ಳಿ ಶಹರ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೈಕ ಕಳ್ಳತನ ಪ್ರಕರಣವನ್ನು ಭೇದಿಸಲು ಶಹರ ಠಾಣೆಯ ಇನ್ಸಪೆಕ್ಟರ ಎಮ್ ಎಮ್ ತಹಶಿಲ್ದಾರ ಒಂದು ತಂಡ ರಚಿಸಿದ್ದರುಕಾರ್ಯ ಪ್ರವೃತ್ತರಾದ ಶಹರ ಪೊಲೀಸರು ಖಚಿತ ಮಾಹಿತಿ ಆಧಾರದ ಮೇಲೆ ಓರ್ವ ಆರೋಪಿ ಬಂಧಿಸಿದ್ದಾರೆ.

ಇನ್ನು 33 ವಯಸ್ಸಿನ ಆಂದ್ರಪ್ರದೇಶದ ಗೋಟೂರ ಗ್ರಾಮದ ನಿವಾಸಿ ಆದ ಗೌನಿ ನರೇಂದ್ರ ರೆಡ್ಡಿ ಎಂಬಾತನನ್ನು ಹಿಡಿದು ವಿಚಾರಣೆ ನಡೆಸಿದಾಗ ಆರೋಪಿತನು ಬೈಕ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಅಲ್ಲದೇ ಸುತ್ತ ಮುತ್ತ ಶಹರಗಳಾದ ದಾವಣಗೇರಿ, ಹರಿಹರ, ಬಳ್ಳಾರಿ, ಧಾರವಾಡದಲ್ಲಿ ಕಳ್ಳತನ ಮಾಡಿದದ್ದಾಗಿ ಒಪ್ಪಿಕೊಂಡಿದ್ದು.

ಇನ್ನು ಆರೋಪಿಯಿಂದ ಒಟ್ಟು 3 ಲಕ್ಷ ರೂ ಮೌಲ್ಯದ 4 ಬೈಕಗಳು ಹಾಗೂ ಒಂದು ಸ್ಕೂಟರ ಸಮೇತ ಒಟ್ಟು 5 ಬೈಕಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಇನ್ನು ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ .ಹಾಗೂ ಡಿಸಿಪಿಗಳಾದ ಸಿ ಆರ್ ರವೀಶ. ನಂದಗಾವಿ ಇವರ ಮಾರ್ಗದರ್ಶನದಲ್ಲಿ

ಶಹರ ಪೊಲೀಸ್ ಠಾಣೆಯ ಇನ್ಸಪೆಕ್ಟರ ಎಮ್ ಎಮ್ ತಹಶಿಲ್ದಾರರ ನೇತೃತ್ವದಲ್ಲಿ ಪಿ.ಎಸ್.ಐ.ಗಳಾದ ವಿನೋದ ದೊಡ್ಡಲಿಂಗಪ್ಪನವರ, ಮಾರುತಿ. ಆರ್. ಮತ್ತು ಸಿಬ್ಬಂದಿಗಳಾದ, ಎ.ಎಸ್.ಐ ದಾಸಣ್ಣವರ, ವಿಠಲ ಭೋವಿ, ಶಂಕರಗೌಡಾ ಹೊಸಮನಿ, ಕನಕಪ್ಪ ರಗಣಿ, ರಾಮರಾವ್ ರಾಠೋಡ, ರವಿ ಕೆಂದೂರ, ರುದ್ರಪ್ಪ ಹೊರಟ್ಟಿ, ಸುಧಾಕರ ನೇಸೂರ ಈಶ್ವರಪ್ಪ ಕುರುವಿನಶೆಟ್ಟಿ, ವಾಯ್.ಎಮ್.ಶೇಂಡೈ ಇವರ ಕಾರ್ಯ ವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಎನ್. ಶಶಿಕುಮಾರ ರವರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!