ಪೊಲೀಸ ಪೇದೆಯ ಮೇಲೆ ಬ್ಲೆಡನಿಂದ ಹಲ್ಲೆ ಮಾಡಿದ ತಮಾಟಗಾರ ಆಂಡ್ ಟೀಮ್

ಪೊಲೀಸ್ ಪೇದೆ ಯ ಮೇಲೆ ಕೈ ಮುಖಂಡನ ಸಹೋದರನಿಂದ ಹಾಗು ಆತನ ಸ್ನೇಹಿತರಿಂದ ಹಲ್ಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಕೈ ಮುಖಂಡ ಇಸ್ಮಾಯಿಲ್ ತಮಾಟಗಾರ ಸಹೋದರರಿಂದ ಹಲ್ಲೆ
ಧಾರವಾಡ ಐಸ್ ಗೇಟ್ ಬಳಿ ಮಧ್ಯರಾತ್ರಿ ಕಾರ ಪಾರ್ಕಿಂಗ್ ವಿಚಾರಕ್ಕೆ ಪೋಲಿಸ್ ಪೇದೆಯ ಮೆಲೆ ಬ್ಲೆಡ್ ನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.

ಡಿ ಆರ್ ಪೋಲಿಸ್ ಪೇದೆ ಬಸವರಾಜ ಕಮತರ ಮೆಲೆ ಹಲ್ಲೆ ಮಾಡಿದ ಇಕ್ಬಾಲ್ ತಮಾಟಗಾರ ಆಂಡ್ ಟೀಮ್
ಇಸ್ಲಾಯಿಲ್ ತಮಾಟಗಾರ ಸಹೋದರ ಇಕ್ಬಾಲ್ ತಮಾಟಗಾರ, ಅಮಿರ್ ತಮಾಟಗಾರ, ಮತ್ತು ಅಜಮರ ಮುಲ್ಲಾ ರಿಂದ ಹಲ್ಲೆ
ಬ್ಲೆಡ್ ನಿಂದ ಮುಖದ ಮೆಲೆ ನಾಲ್ಕು ಕಡೆ ಹಲ್ಲೆ ಮಾಡಿದ್ದಾರೆ. ಇನ್ನು ಗಾಯಾಳು ಡಿ ಆರ್ ಪೋಲಿಸ್ ಪೇದೆ ಬಸವರಾಜ್ ಕಮತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ಈ ಕುರಿತು ಧಾರವಾಡ ಉಪನಗರ ಪೋಲಿಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಮೂವರ ವಿರುದ್ದ 307 ಅಡಿಯಲ್ಲಿ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಸದ್ಯ ಘಟನೆಯ ಬಗ್ಗೆ ಪೋಲಿಸ್ ಆಯುಕ್ತರಾದ ಎನ್ ಶಶಿಕುಮಾರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.