ಬಡ್ಡಿ ಹಣದ ಸಲುವಾಗಿ ಯುವಕನ ಮೇಲೆ ನಡಿಯಿತಾ ಹಲ್ಲೆ? ಬೆಂಡಿಗೇರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ಕ್ಷುಲಕ ವಿಚಾರವಾಗಿ ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಕುರಿತಂತೆ ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಗರದ ಗಂಗಾಧರ ನಗರದಲ್ಲಿ ವಿನಾಯಕ ರೋಣದ ಎಂಬಾತನೇ ಹಲ್ಲೆಗೊಳಗಾದ ಯುವಕ.
ಐದು ಸಾವಿರ ರೂ. ಹಣಕ್ಕೆ ಬಡ್ಡಿ ಕೊಡದೆ ಇರುವ ಹಿನ್ನಲೆ ಹಲ್ಲೆ ಮಾಡಿರುವುದಾಗಿ ಯುವಕನ ಕಡೆಯವರಾದ ಗಣೇಶ ಸಿದ್ದಾಪುರ, ಅಭಿಷೇಕ ರಾಮಗೇರಿ, ಯಲ್ಲಪ್ಪ ರಾಮಗೇರಿ, ವರುಣ ಭಜಂತ್ರಿ, ಮಣಿಕಂಠ ಸಿದ್ದಾಪುರ, ನಾಗರಾಜ್ ಭಜಂತ್ರಿ, ತಿರಕ್ ಭಜಂತ್ರಿಯಿಂದ ಹಲ್ಲೆ ಆರೋಪ ಗಂಭೀರವಾಗಿ ಕೇಳಿ ಬಂದಿದೆ.
ಆದರೆ ಘಟನೆ ಕುರಿತಂತೆ ವಿವಾಹಿತ ಗೃಹಿಣಿ ವಿಚಾರವಾಗಿ ಹಲ್ಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಗೃಹಣಿಯೋರ್ವಳಿಗೆ ವಿಡಿಯೋ ಕಿಟಲೆ ಮಾಡಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಆದರೆ ಪೊಲೀಸರ ಮೂಲಗಳ ಪ್ರಕಾರ ಗೃಹಣಿ ವಿಚಾರವಾಗಿ ಯುವಕನಿಗೆ ಬುದ್ಧಿ ಮಾತು ಹೇಳಲು ವಿನಾಯಕನನ್ನು ಹಿಡಿಯಲು ಹೋದಾಗ ಗೋಡೆ ಹಾರಿ ಬಿದ್ದಿರುವುದಾಗಿ ತಿಳಿದು ಬಂದಿದೆ.
ಎರಡೂ ಘಟನೆಗಳನ್ನು ನೋಡುವುದಾದರೆ ಯುವಕ ಯಾವ ಘಟನೆಯಿಂದ ಹಲ್ಲೆಗೊಳಗಾಗಿದ್ದಾನೆಂಬ ಸತ್ಯಾಸತ್ಯತೆ ತಿಳಿದು ಬರಬೇಕಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಮಹಾನಿಂಗ ನಂದಗಾವಿ ಹಾಗೂ ಬೆಂಡಿಗೇರಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡಿರುವ ಯುವಕನನ್ನು ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.