ಕರ್ತವ್ಯ ನಿರ್ಲಕ್ಷ್ಯ ಪೊಲೀಸ ಸಿಬ್ಬಂದಿಯನ್ನು ಅಮಾನತು ಮಾಡಿದ ಪೊಲೀಸ ಆಯುಕ್ತ ಎನ್ ಶಶಿಕುಮಾರ್

ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಅಪರಾಧ ಕೃತ್ಯಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಖಾಕಿಯ ತಲೆದಂಡವಾಗಿದೆ.
ಹೊಸ ವರ್ಷ ಆರಂಭದ ಬೆನ್ನಲ್ಲೇ ನಗರದಲ್ಲಿ ಚಾಕು ಇರಿತ ಪ್ರಕರಣಗಳು ಹೆಚ್ಚಾಗಿತ್ತು. ಅದರಲ್ಲೂ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕರ ಗುಂಪೊಂದು ಹಾಡುಹಗಲೇ ಮಾರುತಿ ನಾರಾಯಣಪುರ ಎಂಬಾತನನ್ನು ಅಟ್ಟಾಡಿಸಿ ಮನಬಂದಂತೆ ಹಲ್ಲೆ ಮಾಡಿ, ಚಾಕು ಇರಿಯಲಾಗಿತ್ತು.
ಈ ಘಟನೆಯ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಎಲ್ಲೆಡೆ ವೈರಲ್ ಕೂಡಾ ಆಗಿತ್ತು. ಇದಾದ ನಂತರ ಹು-ಧಾ ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳಿ ತಪ್ಪಿದೆ. ಹಗಲೋತ್ತಿನಲ್ಲಿಯೇ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ವಾತಾವರಣ ನಿರ್ಮಾಣ ಆಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಇದೀಗ ಎಚ್ಚೆತ್ತುಕೊಂಡ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಾವೇ ಸ್ವತಃ ಏರಿಯಾ ಡೋಮಿನೇಷನ್ ಮಾಡುವ ಜೊತೆಗೆ ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದ ಹಳೇಹುಬ್ಬಳ್ಳಿ ಠಾಣೆಯ ಸಿಬ್ಬಂದಿ ತಲೆದಂಡ ಮಾಡಿದ್ದಾರೆ.
ಅಯೋಧ್ಯೆನಗರದಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಸಂತೋಷ ವಲ್ಲ್ಯಾಪುರ ಅಮಾನತು ಮಾಡಿರುವ ಕಮಿಷನರ್ ಎನ್.ಶಶಿಕುಮಾರ್ ಅವರು ಅವಳಿನಗರದಲ್ಲಿ ಬೀಟ್ ವ್ಯವಸ್ಥೆ ಸದೃಢಗೊಳಿಸಲು ಖಡಕ್ ಸೂಚನೆ ಕೊಟ್ಟಿದ್ದಾರೆ.