Uncategorized

ಗುಣಮಟ್ಟದ ಕಡ್ಲೆ ಬೆಳೆಗೆ ಹೆಸರುವಾಸಿ ಹರಿ ಓಂ ಸೇಲ್ಸ್ ಕಾರ್ಪೋರೇಷನ…..ಗ್ರಾಹಕರ ನಂಬಿಕೆಯ ಕಡ್ಲೆ ಬೆಳೆ…

ಹುಬ್ಬಳ್ಳಿಯ ಗಾಮನಗಟ್ಟಿ ಇಂಡಸ್ಟ್ರಿಯಲ್ ಏರಿಯಾದಲ್ಲಿನ ಹರಿ ಓಂ ಸೇಲ್ಸ್ ಕಾರ್ಪೋರೇಷನ್ ಅತ್ಯುತ್ತಮ ಗುಣಮಟ್ಟದ ಕಡ್ಲೆ ಬೆಳೆ ತಯಾರಿಸಿ, ರಾಜ್ಯ ಅಷ್ಟೇ ಅಲ್ಲದೇ ಹೊರರಾಜ್ಯಕ್ಕೂ ರಪ್ತು ಮಾಡುತ್ತಿದೆ.

ಹೌದು, ಕಳೆದ 1976 ರಲ್ಲಿ ಉದ್ಯಮಿ ಕೃಷ್ಣಸಾ ಯಮನಸಾ ಕೋಡೆ ಅವರು ಫ್ಯಾಕ್ಟರಿ ಹುಟ್ಟು ಹಾಕಿದ್ದಾರೆ. ಆ ಬಳಿಕ Made from High Quality Chana Dal ಎಂಬ ಶಿರ್ಷಿಕೆ ಅಡಿಯಲ್ಲಿ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಗುಣಮಟ್ಟದಲ್ಲಿ ಕಡಿಮೆಯಾಗದಂತೆ ಅತ್ಯಂತ ಶುಚಿತ್ವದಿಂದ ಕಡ್ಲೆ ಬೆಳೆ ವಸ್ತುಗಳನ್ನು ತಯಾರಿಸುತ್ತಿದೆ.

ಸದ್ಯ ವಿಜಯ ಕೃಷ್ಣಸಾ ಕೋಡೆ, ಹಾಗೂ ಶ್ರೀಹರಿ ಕೋಡೆ ಅವರ ಸಾರಥ್ಯದಲ್ಲಿ ಫ್ಯಾಕ್ಟರಿ ನೇರವಾಗಿ ರೈತರಿಂದ ಧಾನ್ಯಗಳನ್ನು ಖರೀದಿಸಿ, ಫ್ಯಾಕ್ಟರಿಯಲ್ಲಿ ಅಚ್ಚುಕಟ್ಟಾಗಿ ಕಡ್ಲೆ ಬೆಳೆಯನ್ನು ಪ್ಯಾಕಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅದರ ಗುಣಮಟ್ಟದ ಪರೀಕ್ಷೆಯನ್ನು ಸಹ ಮಾಡಿ ಗ್ರಾಹಕರಿಗೆ ಕಳಿಸುತ್ತಿದ್ದಾರೆ.

ಈ ಸಂಸ್ಥೆಯಲ್ಲಿ 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ದಿನಕ್ಕೆ 15 ಟನ್’ಕ್ಕೂ ಅಧಿಕ ಹೆಚ್ಚು ವಸ್ತುಗಳನ್ನು ಉತ್ಪಾದನೆ ಮಾಡುತ್ತಿದೆ. ಇದರಲ್ಲಿ 10 Kg, 30 kg & 50kg ಪಾಕೆಟ್’ಗಳು ಒಳಗೊಂಡಿದೆ.

ಈ ಸಂಸ್ಥೆ ಆಹಾರ ಇಲಾಖೆ ಹಾಗೂ ಸರ್ಕಾರದ ನಿಯಮಾವಳಿ ಪ್ರಕಾರ ಪರವಾನಗಿ ಪಡೆದುಕೊಂಡು, ಜನರ ವಿಶ್ವಾಸಗಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ತಮ್ಮ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸುವ ಆಸೆಯನ್ನು ಸಂಸ್ಥೆ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!