ನವಜಾತ ಶಿಶುವನ್ನು ಪ್ಲ್ಯಾಸ್ಟಿಕ್ ಚೀಲದಲ್ಲಿ ಹಾಕಿ ರಸ್ತೆಯಲ್ಲಿ ಎಸೆದು ಹೋದ ಪಾಪಿಗಳು….

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆದು ಹೋಗಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಪಾಟೀಲ್ ಗಲ್ಲಿಯ ಹತ್ತಿರದ ಏಳು ಮಕ್ಕಳ ತಾಯಿ ಗುಡಿ ಹತ್ತಿರ ಯಾರೋ ಶಿಶುವನ್ನು ಬಿಸಾಡಿ ಹೋಗಿದ್ದು, ಇಂದು ಬೆಳಿಗ್ಗೆ ಬೆಂಡಿಗೇರಿ ಪೊಲೀಸರು ಕರ್ತವ್ಯಕ್ಕೆ ಹೋದ ಸಂದರ್ಭದಲ್ಲಿ ನವಜಾತ ಶಿಶುವನ್ನು ನೋಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ

ಬೆಂಡಿಗೇರಿ ಠಾಣೆಯ ಎಎಸ್ಐ ಕುಸುಗಲ್ ಆಗಮಿಸಿದ್ದು, ನವಜಾತ ಶಿಶುವನ್ನು ಬೀದಿಬದಿಯಲ್ಲಿ ಬಿಸಾಡಿ ಹೋಗಿದ್ದನ್ನು ನೋಡಿ ಕಿಂಸಗೆ ರವಾನಿಸುತ್ತಿದ್ದು ಇನ್ನು ಪಾಪಿ ತಂದೆ-ತಾಯಿ ಯಾರು ಎಂಬುದನ್ನು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.