ಹುಬ್ಬಳ್ಳಿಯಲ್ಲಿ ಜಡೆ ಜಗಳ ಕೂದಲು ಎಳೆದು ಕುತ್ತಿಗೆಯ ಮೇಲೆ ಕಾಲು ಇಟ್ಟು ಹಲ್ಲೆ ಮಾಡಿದ ಮಹಿಳೆಯರು

ಕ್ಷುಲ್ಲಕ ವಿಚಾರಕ್ಕೆ ಮಹಿಳೆ ಮೇಲೆ ಇಬ್ಬರು ಮಹಿಳೆಯರು ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಕೂಗಳತೆಯ ಜನತಾ ಬಜಾರ್ ಬಳಿಯಲ್ಲಿ ನಡೆದಿದೆ.
ಇಬ್ಬರು ಮಹಿಳೆಯರು ಮಹಿಳೆಯ ಕೂದಲು ಹಿಡಿದು, ಕಾಲಿನಿಂದ ಒದಿದ್ದು ಅಲ್ಲದೆ ಕೂದಲು ಎಳೆದು ಕುತ್ತಿಗೆಯ ಮೇಲೆ ಕಾಲು ಇಟ್ಟು ಅವಾಚ್ಯವಾಗಿ ಬೈದು ಬಡಿಗೆಯಿಂದ ಹೋಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ ಆಗಿದ್ದು ಇವರು ಮಹಿಳೆಯರಾ ಎಂದು ಅಲ್ಲೆ ಇದ್ದ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ
ಇನ್ನು ಪ್ರತಿ ದಿನ ಇಂತಹ ಮಹಿಳೆಯರ ಉಪಟಳದಿಂದ ಮಾರ್ಕೆಟಿಗೆ ಬರುವ ಮಹಿಳೆಯರು ಯಾಕಪ್ಪಾ ಈ ಮಾರ್ಕೆಟಿಗೆ ಬಂದೆ ಅನ್ನುವ ಹಾಗೆ ಆಗಿದೆ.
ಮಹಿಳೆಯರ ವರ್ತನೆ ಇತರ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದೆ. ಸದ್ಯ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಇನ್ನು ಪೊಲೀಸರು ಇಂತಹ ಮಹಿಳೆಯರ ವಿರುದ್ಧ ಸರಿಯಾದ ಕಾನೂನು ಕ್ರಮ ಕೈಗೊಳಬೇಕೆಂದು ಅಲ್ಲಿನ ವ್ಯಾಪಾರಸ್ಥರು ವಿನಂತಿಸಿದ್ದಾರೆ