ಅನುಮಾನಾಸ್ಪದವಾಗಿ ವ್ಯೆಕ್ತಿಯ ಸಾವು ಇದು ಆತ್ಮಹತ್ಯೆ ಅಥವಾ ಕೊಲೆ ?

ಛೋಟಾ ಮುಂಬಯಿ ಅಂತಾ ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ಕ್ರೈಂ ಹೆಚ್ಚಾಗುತ್ತಿದ್ದು ನಿನ್ನೆ ಸಂಜೆ ಹಣ ದೋಚಿ ಪರಾರಿ ಆಗಿದ್ದು
ಹುಬ್ಬಳ್ಳಿಯ ಬಾಣತಿಕಟ್ಟೆಯ ಮೆಹಬೂಬ ನಗರದ ಮಾಂಸದಂಗಡಿಯಲ್ಲಿಯೇ ಅನುಮಾನಾಸ್ಪದವಾಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ
ಸವದತ್ತಿ ತಾಲ್ಲೂಕಿನ ಬೆಳವಾಡಿ ಗ್ರಾಮದ ಅಶ್ವಾಕ್ ಬೇಪಾರಿ ಮೃತಪಟ್ಟಿರುವ ವ್ಯಕ್ತಿ ಯಾಗಿದ್ದು
ಕಳೆದ ರಾತ್ರಿ ಮನೆಯಲ್ಲಿ ಜಗಳ ಮಾಡಿಕೊಂಡು ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದ ಅಷ್ಪಕ್ ಬೆಪಾರಿ
ತಂದೆಯನ್ನು ಕರೆದೊಯ್ಯಲು ಮಗ ಇಂದು ಸಂಬಂಧಿಕರ ಮನೆಗೆ ಬಂದಿದ್ದು ಆದ್ರೆ ಅಷ್ಪಕ ಬೆಪಾರಿಯು
ಮಗನ ಮುಂದೆಯೇ ಸಂಬಂಧಿಕರ ಮಾಂಸದ ಅಂಗಡಿಯಲ್ಲಿ
ಹೊಟ್ಟೆಗೆ ಹಾಗೂ ಕುತ್ತಿಗೆಗೆ ಚಾಕು ಹಾಕಿಕೊಂಡಿರುವುದಾಗಿ ಆತನ ಮಗ ಸ್ವತಃ ಹೇಳುತ್ತಿದ್ದು

ಇನ್ನು ಸ್ಥಳಕ್ಕೆ ಆಗಮಿಸಿದ ಹಳೆ ಹುಬ್ಬಳ್ಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ವ್ಯೆಕ್ತಿಯ ಮಗನನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ
ಇನ್ನು ಸ್ಥಳದಲ್ಲಿ ಚಾಕು ಕೂಡಾ ದೊರಕಿದ್ದು. ಬೆರಳಚ್ಚು ತಜ್ಞರು ಕೂಡಾ ಆಗಮಿಸಿ ತನಿಖೆ ನಡೆಸುತಿದ್ದು ಇದು ಕೊಲೆ ಅಥವಾ ಆತ್ಮ ಹತ್ಯೆ ಅಂತಾ ಪೊಲೀಸರ ತನಿಖೆಯಿಂದ ಸತ್ಯ ಹೊರ ಬರಬೇಕಿದೆ
ವರದಿ…. ರಾಘವೇಂದ್ರ ಬಿ ಸಿ