ಚರಂಡಿಯಲ್ಲಿ ಪತ್ತೆಯಾದ ಹಸುಗೂಸು ಮಾನವಿಯತೆ ಮರೆತರಾ ಆ ಮಗುವಿನ ತಂದೆ ತಾಯಿ

ನವಲಗುಂದ ತಾಲ್ಲೂಕಿನ ಗೊಬ್ಬರಗುಂಪಿ ಗ್ರಾಮದ ಚರಂಡಿಯಲ್ಲಿ ಬೆಳಗಿನ ಆರು ಗಂಟೆಗೆ ಅನಾಥ ಗಂಡು ಹಸುಗೂಸೊಂದು ಪತ್ತೆಯಾಗಿದ್ದು, ಇನ್ನು ಚರಂಡಿಯಲ್ಲಿ ಇದ್ದ ಹಸುಗೂಸನ್ನು ನೋಡಿದ ಮಹಿಳೆಯರು ಚರಂಡಿಯಿಂದ ಮಗುವನ್ನು ರಕ್ಷಿಸಿ ತಕ್ಷಣ ಮೈಮೇಲೆ ಇದ್ದ ಕೊಳೆಯನ್ನು ಸ್ವಚ್ಛಗೊಳಿಸಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮದ ಮಹಿಳೆಯರು ಮಗುವನ್ನು ತಕ್ಷಣ ಹಾಲುಣಿಸಲು ಬಾನಂತಿಯ ಮನೆಗೆ ಕರೆದುಕೊಂಡು ಹೋಗಿ ನಂತರ ನವಲಗುಂದ ಪೊಲೀಸ್ ಠಾಣೆಗೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಗೆ ಮಾಹಿತಿ ತಿಳಿಸಿದ್ದು ಚರಂಡಿಯಲ್ಲಿ ಬಿದ್ದ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇನ್ನು ಚಿಕಿತ್ಸೆಗಾಗಿ ನವಲಗುಂದ ತಾಲೂಕಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.ಇನ್ನು ಪೊಲೀಸರು ಆ ಮಗು ಹೇಗೆ ಚರಂಡಿಯಲ್ಲಿ ಬಿದ್ದಿತು ಅಂತಾ ತನಿಖೆ ಪ್ರಾರಂಭಿಸಿದ್ದಾರೆ
