ಇನ್ಸಪೆಕ್ಟರ ಸಮಿವುಲ್ಲಾ ಟೀಮ್ ಭರ್ಜರಿ ಭೇಟೆ 5.87.000 ಮೌಲ್ಯದ ಚಿನ್ನಾಭರಣ ವಶ

ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 5,87,000 ರೂ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಮೂರು ಜನ ಆರೋಪಿ ಹಾಗೂ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಆಗಷ್ಟ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹುಬ್ಬಳ್ಳಿ ಎಪಿಎಂಸಿ ಈಶ್ವರನಗರ ಸಮೃದ್ಧಿ ಬಡಾವಣೆ, ಎಸ್.ಆರ್.ನಗರ ಅಂಕೋಲೆಕರ್ ಲೇಔಟ್ ಹಾಗೂ ಎಂಐಜಿ ಕಾಲೋನಿಯಲ್ಲಿ ಕಳ್ಳರು ಕಳ್ಳತನ ಮಾಡಿ ಕೈಚಳಕ ತೋರಿದ್ದಾರೆ

ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 5,87,000 ರೂ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿದ್ದಪ್ಪ ಅಂಬಿಗೇರ್, ವಿಷ್ಣು ಅಂಬಿಗೇರ, ಕುನಾಲಸಿಂಗ್ ಟಾಕ್ ಹಾಗೂ ಅಪ್ರಾಪ್ತ ಪ್ರೀತಂ ಸೂಡಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣವನ್ನು ಬೇಧಿಸಿದ ನವನಗರ ಎಪಿಎಂಸಿ ಠಾಣೆಯ ಪೊಲೀಸರು ಮೂವರು ಆರೋಪಿಗಳು ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿದ್ದಾರೆ.

ಇನ್ನು ಎನ್ ಶಶಿಕುಮಾರ ಪೊಲೀಸ ಆಯುಕ್ತರು. ಡಿಸಿಪಿ ಗಳಾದ ಮಹಾನಿಂಗ್ ನಂದಗಾವಿ. ಆರ್.ರವೀಶ. ಹಾಗೂ ಶಿವಪ್ರಕಾಶ ನಾಯ್ಕ ಎಸಿಪಿ ಇವರುಗಳ ಮಾರ್ಗದರ್ಶನದಲ್ಲಿ ಸಮಿವುಲ್ಲಾ ಕೆ. ಇನ್ಸಪೆಕ್ಟರ ಹಾಗೂ ಪಿ.ಎಸ್.ಐ ಗಳಾದ ದೇವೆಂದ್ರ ಮಾವಿನಿಂಡಿ, ಎಂ.ಬಿ ಈಟಿ ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರವಿ.ಆರ್ ಹೊಸಮನಿ. ಬೀರನೂರ. ಸಿ.ವೈ ಬಕ್ಕಸದ. ಬಿ.ಎಸ್ ಮನ್ನೂರ ಪಿ ಎಸ್ ಚಲವಾದಿ.ಎಂ ಎಂ ತಳಗೇರಿ. ಐ ಬಿ ಮಡಿವಾಳರ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ಜನರಾದ ಎಂ.ಎಸ್ ಚಿಕ್ಕಮಠ, ಆರ್.ಕೆ ಭಡಂಕರ, ರವಿ ಗೋಮಪ್ಪನವರ ರವರುಗಳ ಸಹಾಯದಿಂದ ಆರೋಪಿಗಳನ್ನು ಬಂದಿಸಿದ್ದಾರೆ. ಇವರ ಕಾರ್ಯಾಚರಣೆಗೆ ಪೊಲೀಸ ಆಯುಕ್ತರು ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.