Latestಕಲೆ – ಸಾಹಿತ್ಯ

ಕವನ ಸ್ಪರ್ಧೆಯಲ್ಲಿ ಪೊಲೀಸ್ ಅಧಿಕಾರಿಗೆ ದ್ವೀತಿಯ ಬಹುಮಾನ

ಹುಬ್ಬಳ್ಳಿ –

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕವನ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿಗೆ ದ್ವೀತಿಯ ಬಹುಮಾನ ಲಭಿಸಿದೆ‌.ಹೌದು ನವೆಂಬರ್ ತಿಂಗಳದ ಹಿನ್ನೆಲೆಯಲ್ಲಿ ಉಸಿರಾಗಲಿ ಕನ್ನಡ ಎಂಬ ವಿಷಯದ ಮೇಲೆ ಕೊಡಗಿನ ಓಂ ಬಳಗ ಕವನ ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಸಾಹಿತ್ಯ ಮನಸ್ಸುಗಳು ತಮ್ಮ ತಮ್ಮ ಕವನಗಳನ್ನು ಕಳಿಸಿದ್ದರು.ಇದರಲ್ಲಿ ಹುಬ್ಬಳ್ಳಿಯ E&C ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಮಾಳಗೊಂಡ ಕೂಡಾ ತಮ್ಮ ಕವನವನ್ನು ರಚನೆ ಮಾಡಿ ಕಳಿಸಿದ್ದರು

ನೂರಕ್ಕೂ ಹೆಚ್ಚು ಸಾಹಿತ್ಯ ಮನಸ್ಸುಗಳು ಈ ಒಂದು ಸ್ಪರ್ಧೆಯಲ್ಲಿ ತಮ್ಮ ತಮ್ಮ ಕವನಗಳನ್ನು ಕಳಿಸಿ ಕೊಟ್ಟಿದ್ದರು.ಇನ್ನೂ ಕಳೆದ 13 ವರುಷಗಳಿಂದ ಬಿಡುವಿಲ್ಲದ ಕೆಲಸದ ನಡುವೆಯೂ ಸಮಯವನ್ನು ಬಿಡುವು ಮಾಡಿಕೊಂಡು ಆಗಾಗ್ಗೆ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ್ ಮಾಳಗೊಂಡ ಬಿಡುವಿಲ್ಲದ ವೃತ್ತಿಯ ನಡುವೆ ಕವನ ರಚನೆ ಮಾಡಿಕೊಂಡು ಬರುತ್ತಿದ್ದಾರೆ.ಕಥೆ ಕವನ ಸಂಕಲನ ರಚನೆ ಮಾಡಿಕೊಂಡು ಬರುತ್ತಾ ತಮ್ಮಲ್ಲಿನ ಸಾಹಿತ್ಯದ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.ಇವರ ಪ್ರತಿಭೆಗೆ ದೂರದ ಕೊಡಗಿನ ಓಂ ಬಳಗದ ಕುಲತಿಲಕೆ ಕೂಗು ಎಂಬ ಕವನ ಸಂಕಲನಕ್ಕೆ ದ್ವೀತಿಯ ಪ್ರಶಸ್ತಿ ನೀಡಿ ಗೌರವಿಸಿದೆ‌. ಪ್ರಶಸ್ತಿಯನ್ನು ಇನ್ನೆರಡು ದಿನಗಳಲ್ಲಿ ಓಂ ಬಳಗ ನೀಡಿ ಗೌರವಿಸಲಿದೆ.

Leave a Reply

Your email address will not be published. Required fields are marked *

error: Content is protected !!