Latestಆರೋಗ್ಯ

ವಾರಕ್ಕೊಮ್ಮೆಯಾದ್ರೂ ಹೀಗೆ ನಡಿಯಬೇಕಂತೆ – ಏನಾಗುತ್ತದೆ

ಬೆಂಗಳೂರು –

ಬದಲಾದ ಇಂದಿನ ಜನಜೀವನ ವ್ಯವಸ್ಥೆಯ ನಡುವೆ ಎಲ್ಲವೂ ಬದಲಾಗಿದೆ. ಹಿಂದೆ ಮಾಡಲಾಗುತ್ತಿದ್ದ ಕೆಲಸ ಕಾರ್ಯಗಳನ್ನು ಇಂದು ಯಂತ್ರಗಳ ಮೂಲಕ ಮಾಡಿಸುತ್ತಿದ್ದೇವೆ. ದೂರ ದೂರ ನಡೆದುಕೊಂಡು ಹೋಗುತ್ತಿದ್ದ ಮನಷ್ಯನನ್ನು ಬೈಕ್ ಕಾರುಗಳು ಹೊತ್ತುಕೊಂಡು ಹೋಗುತ್ತಿವೆ. ಹೀಗೆ ಬದಲಾದ ವ್ಯವಸ್ಥೆಯ ನಡುವೆ ಸಿಕ್ಕ ಮನುಷ್ಯ ಬದಲಾಗಿದ್ದು ಇದರೊಂದಿಗೆ ದೇಹಕ್ಕೇ ಹತ್ತು ಹಲವಾರು ರೋಗಗಳನ್ನು ತಂದುಕೊಂಡಿದ್ದಾನೆ. ಹಿಂದೆ ಇದ್ದ ವ್ಯವಸ್ಥೆಯನ್ನು ಇಂದು ನಾವು ಮಾಡಲು ಹೊರಟರೇ ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಸ್ವಲ್ಪು ಬಿಡುವಿಲ್ಲದೇ ಕಾಲಚಕ್ರದ ಹಾಗೇ ತಿರುಗುತ್ತವೆ ದುಡಿಯಲು ಬಡಿದಾಡುತ್ತೇವೆ. ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಎಲ್ಲಿ ನೋಡಿದಲ್ಲೂ ಹೈಟೇಕ್ ಹೈಟೇಕ್ ಹೀಗಿರುವಾಗ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಲ್ಲಿ ಇರುತ್ತದೆ ಹೇಳಿ. ಇಂಥಹ ಪರಸ್ಥಿತಿಯ ನಡುವೆಯೂ ಸಿಕ್ಕಾಪಟ್ಟಿಯಾದ ಒತ್ತಡದ ಜನಜೀವನದ ನಡುವೆ ನಾವು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸಮಯ ಕೊಡಬೇಕು. ಹೌದು ಬೆಳಿಗ್ಗೆ ಮತ್ತು ತಪ್ಪದೇ ವಾಕಿಂಗ್ ಮಾಡಬೇಕು. ಇದಕ್ಕೂ ಕೂಡಾ ನಮ್ಮ ಬಳಿ ಸಮಯವಿಲ್ಲದಂತಹ ಒತ್ತಡದ ಜೀವನವನ್ನು ನಾವು ಇಂದು ನಡೆಸುತ್ತಿದ್ದೆವೆ. ಇದು ಸರ್ವೆ ಸಾಮಾನ್ಯವಾದ್ರೆ ಇದರ ನಡುವೆ ವಾರಕ್ಕೊಮ್ಮೆಯಾದ್ರೂ ಒಂದು ಕಿಲೋ ಮೀಟರ್ ಬರಿಗಾಲಿನಲ್ಲಿ ನಡೆಯಬೇಕಂತೆ

Leave a Reply

Your email address will not be published. Required fields are marked *

error: Content is protected !!