ರಾಜಕೀಯರಾಜ್ಯ

ಪೊಲೀಸರ ಮೇಲೆ ಕೈ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ – ಬಸವರಾಜ ಬೊಮ್ಮಾಯಿ

ಧಾರವಾಡ –

ಪೊಲೀಸರ ಮೇಲೆ ಕೈ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು

ಧಾರವಾಡದಲ್ಲಿ ಮಾತನಾಡಿದ ಅವರು ಧಾರವಾಡದಲ್ಲಿ ಎರಡು ದಿನಗಳ ಜಿಂದೆ ಧಾರವಾಡದಲ್ಲಿ ಇರಾನಿ ಗ್ಯಾಂಗ್‌ನಿಂದ ಪೊಲೀಸರ ಮೇಲೆ ಹಲ್ಲೆ ವಿಚಾರ ಕುರಿತು ಒಂದು ಪೊಲೀಸರ ಮೇಲೆ ಕೈ ಮಾಡಿದವರ ಮೇಲೆ‌ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಕೆಲವೇ ದಿನಗಳಲ್ಲಿ ನೀವು ಆ್ಯಕ್ಷನ್ ನೋಡ್ತಿರಾ ಎಂದರು.ಈ ಹಿಂದೆ ಕೂಡ ಅವರು ಹಲ್ಲೆ ಮಾಡಿದ್ದರು ಕಾನೂನು ಕೈ ತೆಗೆದುಕೊಳ್ಳುವವರ ಸದೆ ಬಡೆಯುವ ಕೆಲಸ ಮಾಡುತ್ತೇವೆ ಮರಾಠ ಸಮಾಜಕ್ಕೆ ಮೀಸಲಾತಿ ನೀಡದಿದ್ದಲ್ಲಿ ಚುನಾವಣೆ ಬಹಿಷ್ಕಾರ ಹೇಳಿಕೆ ನೀಡಿದ ಶಾಸಕಿ ಅಂಜಲಿ ನಿಂಬಾಳಕರ ಹೇಳಿಕೆಗೆ ನಾನು ಪ್ರತಿಕ್ರಿಯೆ ಮಾಡಲು ಸಾಧ್ಯವಿಲ್ಲ ಸಮಗ್ರ ಸಮಾಜಗಳು ಹೇಳುವುದನ್ನುನಮ್ಮ ಸರ್ಕಾರ ಪರಿಗಣಿಸುತ್ತದೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಅದು ಮಾಧ್ಯಮಗಳ‌ ಉಹಾಪೋಹ ಮಾತ್ರ ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುತ್ತಾರೆ ಸದೃಢವಾದ ಸರ್ಕಾರ ಕೊಡುತ್ತಾರೆ, ಇದರಲ್ಲಿ ಎರಡು ಮಾತೇ ಇಲ್ಲ ಎಂದು ಗೃಹ ಸಚಿವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!