Latestಹುಬ್ಬಳ್ಳಿ-ಧಾರವಾಡ

ಭಾರತ್ ಬಂದ್ ಅವಳಿ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ಬಂದ್ ಠುಸ್…..

ಹುಬ್ಬಳ್ಳಿ ಧಾರವಾಡ –

ಕೇಂದ್ರ ಸರ್ಕಾರದ ಕೃಷಿ ವಿರೋಧ ನೀತಿಯನ್ನು ಖಂಡಿಸಿ ಕರೆ ನೀಡಲಾಗಿರುವ ಭಾರತ್ ಬಂದ್ ಗೆ ಹುಬ್ಬಳ್ಳಿ ಧಾರವಾಡದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.ಹೌದು ಬಂದ್ ಹಿನ್ನಲೆಯಲ್ಲಿ ಈ ಮೊದಲೇ ಬೆಂಬಲ ನೀಡುವಂತೆ ಹಲವಾರು ಸಂಘಟನೆಯವರು ಕರೆ ನೀಡಿದ್ದರು ಜೊತೆಗೆ ಇಂದು ಕೂಡಾ ಅಲ್ಲಲ್ಲಿ ಪ್ರತಿಭಟನೆ ಮಾಡಿದ್ದು ಕಂಡು ಬಂದಿತು.

ಧಾರವಾಡದಲ್ಲಿ ಜಯ ಕರ್ನಾಟಕ ಸಂಘಟನೆ ಆರ್ ಕೆಎಸ್ ಸಂಘಟನೆ ಸೇರಿದಂತೆ ಹಲವು ಸಂಘಟನೆ ಗಳು ಬೆಳ್ಳಂ ಬೆಳಿಗ್ಗೆ ಜುಬಲಿ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ರಸ್ತೆ ತಡೆ ಮಾಡಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.ಇನ್ನೂ ಇದೇ ವೇಳೆ ಜಯ ಕರ್ನಾಟಕ ಸಂಘಟನೆಯವರು ಎತ್ತು ಚಕ್ಕಡಿಗ ಳೊಂದಿಗೆ ಬಂದು ಪ್ರತಿಭಟನೆ ಮಾಡಿದರು.

ಜುಬಲಿ ವೃತ್ತದಲ್ಲಿ ಈ ಒಂದು ವಿಭಿನ್ನವಾದ ಪ್ರತಿಭಟನೆಯನ್ನು ಮಾಡಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ಇತ್ತ ಹುಬ್ಬಳ್ಳಿಯಲ್ಲೂ ಕೂಡಾ ಕೂಡಾ ಯಾವುದೇ ಬೆಂಬಲ ಕಂಡು ಬರಲಿಲ್ಲ. ಎಂದಿನಂತೆ ನಗರದಲ್ಲಿ ಬಸ್ ಸಂಚಾರ ಅಂಗಡಿ ಮುಂಗಟ್ಟುಗಳು ತೆರೆದಿದ್ದ ವು ಜನ ಜೀವನ ಕೂಡಾ ಎಂದಿನಂತೆ ಕಂಡು ಬಂದಿದ್ದು ನಗರದಲ್ಲಿ ಕಂಡು ಬಂದಿತು ಇನ್ನೂ ರೈತ ಸಂಘಟನೆಯ ನಾಯಕರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.

ರೈತ ಮತ್ತು ಕೃಷಿ ವಿರೋಧ ನೀತಿಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಬಂದ್ ಗೆ ಈ ಮೂಲಕ ಬೆಂಬಲವನ್ನು ನೀಡಿದರು.ಒಟ್ಟಾರೆ ಹುಬ್ಬಳ್ಳಿ ಧಾರವಾಡದಲ್ಲಿ ಭಾರತ್ ಬಂದ್ ಗೆ ಅಷ್ಟೋಂದು ಪ್ರಮಾಣದಲ್ಲಿ ಬೆಂಬಲ ಕಂಡು ಬರಲಿಲ್ಲ.

Leave a Reply

Your email address will not be published. Required fields are marked *

error: Content is protected !!