ಮಂಡಲ, ಪಂಚಾಯತಿ ಮಟ್ಟದಲ್ಲಿ ಕಾಂಗ್ರೆಸ್ ಸಮಿತಿಯ ರಚನೆಯಾಗಬೇಕು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ- ಡಿ.ಕೆ.ಶಿವಕುಮಾರ್
ಹುಬ್ಬಳ್ಳಿ-ನವೆಂಬರ್ ತಿಂಗಳ ಒಳಗೆ ಮಂಡಲ, ಪಂಚಾಯತಿ ಮಟ್ಟದಲ್ಲಿ ಕಾಂಗ್ರೆಸ್ ಸಮಿತಿಯ ರಚನೆಯಾಗಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹೇಳಿದರು
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಯ ಕುರಿತು ಸಮಗ್ರವಾದ ಯೋಜನೆ ಹಾಕಿಕೊಳ್ಳಲಾಗಿದೆ.
ಇನ್ನು ಪ್ರತಿ ತಿಂಗಳು ಒಂದರಿಂದ ೧೦ ನೇ ತಾರೀಖನ ಒಳಗೆ ಅಗತ್ಯವಾದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹೋರಾಟ ನಡೆಸಲು ಸೂಚನೆಯನ್ನು ಆಯಾ ಜಿಲ್ಲಾಮಟ್ಡದಲ್ಲಿ ನೀಡಲಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಮೊಸಲು ಹಾಲು ಸೇರಿದಂತೆ ಇನ್ನಿತರ ವಸ್ತುಗಳಳಿಗೆ ಜಿಎಸ್ ಟಿ ಹಾಕುವ ಮೂಲಕ ಸಾಮಾನ್ಯ ಜನರಿಗೆ ತೀವ್ರ ಸ್ವರೂಪದ ತೊಂದರೆ ಆಗಿದೆ. ಇದನ್ನ ವಿರೋಧಿಸಿ ಪ್ರತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಭಟನೆಯನ್ನು 75 ಕೀಲೋ ಮೀಟರ್ ವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲು ಸೂಚನೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಕಾಂಗ್ರೆಸ್ ಬಹಳ ಶ್ರಮಿಸಿದೆ. ಆದ್ದರಿಂದ ಆಗಷ್ಟ್ 15 ರಂದು
ಬೆಂಗಳೂರಿನಲ್ಲಿ ಪ್ರೀಡಂ ಪಾರ್ಕ್ ನಲ್ಲಿ ಸ್ವತಂತ್ರ ನಡೆಗೆ ಹಮ್ಮಿಕೊಳ್ಳಲಾಗಿದೆ ಎಂದು. ಅಂದೇ ಸಂಜೆ ಯಾವುದೇ ರಾಜಕೀಯ ಭಾಷಣ ಇಲ್ಲ ದೇಶ ಭಕ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವರಿಗೆ ಪ್ರಮಾಣ ಪತ್ರ ಸಹ ನೀಡಲು ತೀರ್ಮಾನ ಮಾಡಲಾಗಿದೆ ಎಂದರು. ಪ್ರತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಜನರು ಬರಬೇಕು ಎಂದು ಹೇಳಿದರು.
ಮಾಜಿ ಸಚಿವ ಸಂತೋಷ ಲಾಡ್ , ಶಾಸಕರು, ಕಾಂಗ್ರೆಸ್ ಹಿರಿಯ ನಾಯಕರು, ಮುಂತಾದವರಿದ್ದರು
ಸ್ವಾತಂತ್ರ್ಯಕ್ಕಾಗಿ ನಮ್ಮ ನಾಯಕರು ಮಾಡಿದ ತ್ಯಾಗ ಬಲಿದಾನ ಕುರಿತು ಸ್ಮರಣೆ ಮಾಡಲಾಗುವುದು ಎಂದರು.
ಆಗಷ್ಟ್ 2 ರಂದು ರಾಹುಲ್ ಗಾಂಧಿ ನಗರಕ್ಕೆ
ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರುರಾಜ್ಯದಲ್ಲಿ ನಡೆಯುತ್ತಿರುವ ಸಾಕಷ್ಟು ಸಮಸ್ಯೆ , ರಾಜ್ಯದ ದುರಾಡಳಿತ ಕುರಿತು ಚಿಂತನೆ ಆಗಷ್ಟ್ 2 ರಂದು ಸಂಜೆ 8 ಕ್ಕೆ ಖಾಸಗಿ ಹೊಟೇಲ್ ನಲ್ಲಿ ನಡೆಸಲಾಗುವುದು ಎಂದರು.
ಸಾವಿಗೆ ಪರಿಹಾರ ಸಮಾನವಾಗಿ ಸಿಗಲಿ* ಮಂಗಳೂರಿನಲ್ಲಿ ಕೊಲೆಯಾದ ಎರಡು ಕೋಮಿನ ಯುವಕರಿಗೆ ಪರಿಹಾರ ಸರಿಯಾಗಿ ಸಿಗಲಿ ಎಂದರು.