ಕರ್ತವ್ಯದ ವೇಳೆ ಹಿಂದಿನಿಂದ ಮಹಿಳಾ ಪೊಲೀಸಗೆ ಗುದ್ದಿ ಪರಾರಿ ಆದ ಕಾರು!! ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಯ ಜಯಶ್ರೀ ಆಸ್ಪತ್ರೆಗೆ ದಾಖಲು.

ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಠಾಣೆಯ ಸಿಬ್ಬಂದಿ ಜಯಶ್ರೀ ಹುಬ್ಬಳ್ಳಿ ಎಂಬಾತರಿಗೆ ಬೆಳಗಾವಿಯ ಅಧಿವೇಶನದ ಕರ್ತವ್ಯದ ಸಂದರ್ಭದಲ್ಲಿ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹೋಗಿದ್ದ ಹವಾಲ್ದಾರ್ ಜಯಶ್ರೀ ಹುಬ್ಬಳ್ಳಿ ಬುಧವಾರ ಬೆಳ್ಳಿಗ್ಗೆ ಬೆಳಗಾವಿಯ ತಿಲಕವಾಡಿಯ ಮರಾಠ ಕಾಲೋನಿ ಹತ್ತಿರದ ರೈಲ್ವೆ ಫಸ್ಟ್ ಗೇಟ್ ಹತ್ತಿರ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.
ಪರಿಣಾಮ ಸಿಬ್ಬಂದಿ ಜಯಶ್ರೀಗೆ ಗಂಭೀರವಾಗಿ ಗಾಯಗಳಾಗಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಈ ಕುರಿತು ಬೆಳಗಾವಿಯ ಸೌಥ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.