ಹುಬ್ಬಳ್ಳಿಯಲ್ಲಿ ಬಾಲಬಿಚ್ಚಿದ ಪುಡಿರೌಢಿಗಳು…. ತಲ್ವಾರ್, ಚಾಕುವಿನಿಂದ ಹಲ್ಲೆ!!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಪುಡಿರೌಢಿಗಳು ಬಾಲಬಿಚ್ಚಿದ್ದಾರೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚು ಜನರ ಗುಂಪು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆ ಹಳೇಹುಬ್ಬಳ್ಳಿಯ ಹೆಗ್ಗೇರಿ ಬಳಿಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ಹಳೇಹುಬ್ಬಳ್ಳಿಯ ಇರ್ಫಾನ್ ಬೇಪಾರಿ ಹಾಗೂ ಕಲ್ಲಪ್ಪ ಎಂಬಾತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಗೆ ಹೆಗ್ಗೇರಿಯ ಮಲ್ಲಿಕ್ ಮತ್ತು ಆತನ ಸಹಚರರು ತಲ್ವಾರ್ ಮತ್ತು ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ.
ಇನ್ನೂ ಗಾಯಗೊಂಡಿರುವ ಇರ್ಫಾನ್ ಮತ್ತು ಹಲ್ಲೆ ಮಾಡಿದ ಮಲ್ಲಿಕ್ ನಡುವೆ ಹಣಕಾಸಿನ ವ್ಯವಹಾರ ಇತ್ತು, ಇಂದು ಹಣವನ್ನು ವಾಪಾಸ್ ಕೊಡುವುದಾಗಿ ಮಲ್ಲಿಕ್ ಹೆಗ್ಗೇರಿ ಮೈದಾನಕ್ಕೆ ಬರುವಂತೆ ತಿಳಿಸಿದ್ದಾನಂತೆ.
ಅದರಂತೆ ಇರ್ಫಾನ್ ತನ್ನ ಸ್ನೇಹಿತ ಕಲ್ಲಪ್ಪನ ಜೊತೆಗೆ ಹೋದ ಸಂದರ್ಭದಲ್ಲಿ ಏಕಾಏಕಿ ಇರ್ಫಾನ್ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದಾರಂತೆ.
ಸದ್ಯ ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.