ಗ್ರಾಪಂ ಸದಸ್ಯ ದೀಪಕ್ ಪಟದಾರಿ ಕೊಲೆ ಕೇಸ್..
ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ

ಹುಬ್ಬಳ್ಳಿ
ಗ್ರಾಪಂ ಸದಸ್ಯ ದೀಪಕ್ ಪಟದಾರಿ ಕೊಲೆ ಕೇಸ್..
ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ..
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ ಸಿಐಡಿ ಅಧಿಕಾರಿಗಳು..

ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ ಸಿಐಡಿ ಅಧಿಕಾರಿಗಳು..
ಕಳೆದ ಜುಲೈ 4 ರಂದು ಗ್ರಾಪಂ ಸದಸ್ಯ ದೀಪಕ್ ಪಟದಾರಿ ಹತ್ಯೆಯಾಗಿತ್ತು.
ಹುಬ್ಬಳ್ಳಿಯ ರಾಯನಾಳ ಬಳಿ ದೀಪಕ್ ಕೊಚ್ಚಿ ಕೊಲೆ ಮಾಡಿದ್ರು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಲ್ಲಿ ಪೊಲೀಸರ ಮೇಲೆ ಅನುಮಾನ ವ್ಯಕ್ತವಾಗಿತ್ತು.
ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು.
ದೀಪಕ್ ಪಟದಾರಿ ಸಹೋದರ ಸಂಜಯ್ ಗಂಭೀರ ಆರೋಪ ಮಾಡಿದ್ದ.
ಹೀಗಾಗಿ ಪ್ರಕರಣವನ್ನ ಕಳೆದ ಎರಡು ದಿನಗಳ ಹಿಂದೆ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಇದೀಗ ಸಿಐಡಿ ಅಧಿಕಾರಿಗಳಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹ.
ಒಟ್ಟು ಆರು ಜನರ ತಂಡದಿಂದ ಕೊಲೆ ಪ್ರಕರಣದ ಮಾಹಿತಿ ಸಂಗ್ರಹ.
ಇಬ್ಬರು DYSP ಅಧಿಕಾರಿ ಗೀರಿಮಲ್ಲಪ್ಪಾ .ನಂದಕುಮಾರ ನೇತೃತ್ವದಲ್ಲಿ ಮಾಹಿತಿ ಸಂಗ್ರಹ.
ಇಂದು ಮದ್ಯಾಹ್ನ ಹುಬ್ಬಳ್ಳಿ ಗೆ ಆಗಮಿಸಿರೋ ಸಿಐಡಿ ಅಧಿಕಾರಿಗಳು.

ಗ್ರಾಪಂ ಸದಸ್ಯ ದೀಪಕ್ ಕೊಲೆಯಾಗೋ ಮುನ್ನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ASI ಪರಶುರಾಮ್ ಕಾಳೆ ಹುಷಾರ್ ಇರು ಎಂದು ಕರೆ ಮಾಡಿದ್ದ.
ಪರಶುರಾಮ್ ಕಾಳೆ ಆಡಿಯೋ ವೈರಲ್ ಆಗಿತ್ತು