ಕ್ಷುಲ್ಲಕ ಕಾರಣಕ್ಕೆ ಖಾಸಗಿ ಹೋಟೆಲನಲ್ಲಿ ಗಲಾಟೆ, ಬೀರ್ ಬಾಟಲ ಹಾಗು ಮಗ್ಗ ನಿಂದ ಹಲ್ಲೆ.
ಹುಬ್ಬಳ್ಳಿಯ ಗೋಕುಲ್ ರೋಡಿನಲ್ಲಿ ಯುವ ಪೀಳಿಗೆಗಳಿಗೆ ಮೌಜು ಮಾಸ್ತಿ ಮಾಡೋಕೆ ಅಂತಾನೆ ಸ್ಥಾಪನೆ ಮಾಡಿರೋ ಖಾಸಗಿ ಹೋಟೆಲ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಬೀರ್ ಬಾಟಲ್ ಹಾಗೂ ನೀರಿನ ಜಗ್ಗಿನಿಂದ ತಲೆಗೆ ಹಲ್ಲೆ ಮಾಡಲಾಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯ ಹೆಸರು ಹಿರೆಗೌಡರ್ ಎಂದು ತಿಳಿದುಬಂದಿದೆ, ಸುಚಿರಾಯು ಆಸ್ಪತ್ರೆಗೆ ದಾಖಲಿಸಿ ಚಿಕಿಸ್ತೆ ನೀಡಲಾಗುತ್ತಿದೆ.

ಘಟನೆ ನಡೆದ ಸ್ಥಳಕ್ಕೆ ಗೋಕುಲ್ ರೋಡ್ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.