Uncategorized

2160 ರೂಪಾಯಿಗಾಗಿ ಕಣ್ಣಿಗೆ ಕಾರದಪುಡಿ ಹಾಕಿ ಚಾಕು ಇರಿತ

ಹುಬ್ಬಳ್ಳಿಯಲ್ಲಿ ಒಂದ್ ಇಲ್ಲಾ ಒಂದು ಕ್ಷುಲ್ಲಕ ಕಾರಣಕ್ಕೆ ಚಾಕು ತಲವಾರಗಳಿಂದ ಹಲ್ಲೆ ಮಾಡುವುದು ಸರ್ವೇ ಸಾಮಾನ್ಯ ವಾಗಿದೆ. ಪೊಲೀಸರು ಎಷ್ಟೆ ಬಿಗಿ ಮಾಡಿದರು ಈ ಪುಡಿ ರೌಡಿಗಳು ತಮ್ಮ ಬಾಲಾ ಬಿಚ್ಚುತ್ತಲೆ ಇದ್ದಾರೆ.

ಹಾಡು ಹಗಲೇ ಇಬ್ಬರ ನಡುವೆ ಹಣದ ವಿಷಯಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಕಸಬಾಪೇಟೆ ಠಾಣಾ ವ್ಯಾಪ್ತಿಯ ಕರ್ಜಗಿ ಓಣಿ ಯಲ್ಲಿ ನಡೆದಿದೆ. ಇರ್ಫಾನ್ ಬೇಪಾರಿ ಹಾಗೂ ಮೊಹಮ್ಮದ್ ಶಪಿ ಅನ್ನೋರ ನಡುವೆ ಈ ಒಂದು ಜಗಳ ನಡೆದಿದೆ. 2160 ರೂ ತನಗೆ ಬೇಕು ಅಂತಾ  ಇರ್ಫಾನ್ ಬೇಪಾರಿಯು ತರಕಾರಿ ಮಾರುತ್ತಿದ್ದ ಮೊಹಮ್ಮದ್ ಶಪಿಗೆ ಕೇಳುತ್ತಾನೆ  ಸಿಟ್ಟಿನಿಂದ ಮಹಮ್ಮದ ಶಪಿ ಇರ್ಪಾನ ಕಣ್ಣಿಗೆ ಕಾರದ ಪುಡಿ ಹಾಕಿ ಚಾಕುವಿನಿಂದ ಹೊಟ್ಟೆ ಹಾಗು ಬೆನ್ನಿಗೆ ಬಾಗಕ್ಕೆ ಇರಿದಿದ್ದಾನೆ. ಆಮೇಲೆ ಇರ್ಪಾನ ಕೂಡಾ ಶಪಿಗೆ ಎದೆಯ ಭಾಗಕ್ಕೆ ಚಾಕು ಹಾಕಿ ಪರಸ್ಪರ ಹೊಡೆದಾಟ ನಡೆದ್ದು ಶಪಿಗೆ ಅಲ್ಲೆ ಇದ್ದ ಖಾದರ ಎಂಬಾತ ಚಿಕಿತ್ಸೆ ಗೆ ಕಿಂಸಗೆ ದಾಖಲಿಸುತ್ತಾನೆ

ಇನ್ನು ಮೊಹಮ್ಮದ್ ಶಪಿ ಹಾಗೂ ಇರ್ಫಾನ್ ಬೇಪಾರಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ತೆ ಪಡೆದುಕೊಳ್ಳುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಕಾಸಬಾಪೇಟೆ ಠಾಣಾ ಇನ್ಸ್ಪೆಕ್ಟರ್ ಏ ಎಂ ಬನ್ನಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!