ಅಧಿಕಾರ ದುರ್ಬಳಕೆ ಮಾಡಿಕೊಂಡ ಬಿಜೆಪಿ ಪಾಲಿಕೆ ಸದಸ್ಯರು. ಪಾಲಿಕೆಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ ಆಯುಕ್ತರ ನಡೆ ವಿವಾದ್

ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದೇ ಕರೆಯಿಸಿಕೊಳ್ಳುತ್ತಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಯಾರೇ ಏನೇ ಮಾಡಿದ್ರು ನಡೆಯುತ್ತದೆ ಎಂಬೊದಕ್ಕೆ ಪಾಲಿಕೆಯಲ್ಲಿ ಕಂಡು ಬರುತ್ತಿರುವ ಒಂದಲ್ಲ ಒಂದು ಘಟನೆಗಳೇ ಸಾಕ್ಷಿಯಾಗಿವೆ.
ಇನ್ನೂ ಈ ಒಂದು ಪಾಲಿಕೆಗೆ ಕಳೆದ ಒಂದೂವರೆ ವರ್ಷಗಳಿಂದ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಡಾ ಈಶ್ವರ ಉಳ್ಳಾಗಡ್ಡಿಯವರು ಆಯುಕ್ತರಾಗಿ ಬಂದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇನ್ನಷ್ಟು ಆಡಳಿತ ಯಂತ್ರ ಚುರುಕುಗೊಳ್ಳಬೇಕಾಗಿದ್ದು ಇನ್ನೂ ಪಾಲಿಕೆಯಲ್ಲಿ ಬಿಜೆಪಿಯ ಕೆಲ ಪಾಲಿಕೆಯ ಸದಸ್ಯರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಮೇಲಿಂದ ಮೇಲೆ ಕೇಳಿ ಬರುತ್ತಿದ್ದು ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ತಾವು ಇದ್ದ ಕಡೆಯಲ್ಲಿಯೇ ಆಯುಕ್ತರನ್ನು ಕರೆಯಿಸಿಕೊಳ್ಳುತ್ತಿರುವುದು.
ಹೌದು ಸಾಮಾನ್ಯವಾಗಿ ಆಯುಕ್ತರು ಪಾಲಿಕೆಗೆ ಮುಖ್ಯಸ್ಥರು ಇವರ ಇದ್ದ ಕಡೆಯಲ್ಲಿಯೇ ಪಾಲಿಕೆಯ ಸದಸ್ಯರು ಬರಬೇಕು ಅದಕ್ಕೊಂದು ಗೌರವ ಆದರೆ ಪಾಲಿಕೆಯ ಬಿಜೆಪಿಯ ಕೆಲ ಸದಸ್ಯರು ತಾವು ಇದ್ದ ಕಡೆಯಲ್ಲಿಯೇ ತಮ್ಮ ಕಚೇರಿಗೆ ಇಲ್ಲವೇ ಪ್ರವಾಸಿ ಮಂದಿರಕ್ಕೆ ಕರೆಯಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದ್ದು ಇದರೊಂದಿಗೆ ಕೆಲ ಬಿಜೆಪಿಯ ಸದಸ್ಯರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.ಸಾಮಾನ್ಯವಾಗಿ ಶಾಸಕರು ಸಚಿವರು ಆಯುಕ್ತರನ್ನು ಬರಮಾಡಿಕೊಳ್ಳಬಹುದು ಆದರೆ ಅಧಿಕಾರ ಇದೆ ಎಂದುಕೊಂಡಿರುವ ಪಾಲಿಕೆಯ ಕೆಲ ಬಿಜೆಪಿ ಯ ಸದಸ್ಯರು ಆಯುಕ್ತರಿಗೆ ಪೊನ್ ಕರೆ ಮಾಡಿ ತಮ್ಮ ಕಚೇರಿಗೆ ಇಲ್ಲವೇ ತಾವು ಹೇಳಿದ ಸ್ಥಳಕ್ಕೆ ಬರಮಾಡಿಕೊಂಡು ಚರ್ಚೆ ಮಾಡುತ್ತಿರುವುದು ಕಂಡು ಬರುತ್ತಿದೆ.
ಈ ಒಂದು ವಿಚಾರ ಕುರಿತಂತೆ ಪಾಲಿಕೆಯ ತುಂಬೆಲ್ಲಾ ಗುಸು ಪಿಸು ಮಾತುಗಳು ಕೇಳಿ ಬರುತ್ತಿದ್ದು ಕೆಲ ಬಿಜೆಪಿಯ ಸದಸ್ಯರ ವಿರುದ್ದ ಅಸಮಾಧಾನ ಕಂಡು ಬರುತ್ತಿದ್ದು ಆಯುಕ್ತರ ವಿರುದ್ದವೂ ಆಕ್ರೋಶದ ಮಾತುಗಳು ಕೇಳಿ ಬರುತ್ತಿದ್ದು ಕರೆದೆಲ್ಲಲ್ಲ ಹೋಗುವ ಆಯುಕ್ತರೇ ನಿಮಗೆ ನಿಮ್ಮ ಹುದ್ದೆಗೆ ಒಂದು ಗೌರವ ಇದೆ ಅದನ್ನು ನೋಡಿ ಇನ್ನು ಮುಂದೆ ಯಾರಾದರು ಅಲ್ಲಿಗೆ ಬನ್ನಿ ಇಲ್ಲಿಗೆ ಬನ್ನಿ ಎಂದು ಕರೆದರೆ ಒಮ್ಮೆ ವಿಚಾರ ಮಾಡಿ