Uncategorized

ರೈಲಿನಲ್ಲಿ ವ್ಯೆಕ್ತಿಯೊಬ್ಬನ ಬರ್ಬರವಾಗಿ ಕೊಲೆ. ಸ್ಥಳದಲ್ಲಿ ರೈಲ್ವೆ ಪೊಲೀಸರಿಂದ ಪರಿಶೀಲನೆ

ಹುಬ್ಬಳ್ಳಿ: ಗುಂತಕಲ್-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಗುರುವಾರ ತಡರಾತ್ರಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.


ರೈಲು ತಡರಾತ್ರಿ ಬ್ಯಾಹಟ್ಟಿಗೆ ಬಂದಾಗ ವ್ಯಕ್ತಿಯ ಕೊಲೆಯಾಗಿರುವುದು ಕಂಡುಬಂದಿದ್ದು,

ಸ್ಥಳಕ್ಕೆ ರೈಲ್ವೆ ಪೊಲೀಸರು ತೆರಳಿ ಪರಿಶೀಲಿಸಿದ್ದಾರೆ. ರೈಲಿನ ಸಿಬ್ಬಂದಿಯು ಆ ಬೋಗಿಯನ್ನು ಪ್ರತ್ಯೇಕಿಸಿ ಬ್ಯಾಹಟ್ಟಿಯಲ್ಲೇ ನಿಲ್ಲಿಸಿದ್ದಾರೆ.

ಕೊಲೆಯಾದ ವ್ಯಕ್ತಿ ಯಾರು ಹಾಗೂ ಯಾವ ಕಾರಣಕ್ಕಾಗಿ ಯಾರು ಹತ್ಯೆಗೈದಿದ್ದಾರೆಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!