ಸಿಲೆಂಡರ ತುಂಬಿದ ಲಾರಿ ಪಲ್ಟಿ ಕೆಲ ಕಾಲ ಭಯದ ವಾತಾವರಣ

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೇಟ ಹತ್ತಿರ ಸಿಲೆಂಡರ ತುಂಬಿದ ಲಾರಿ ಪಲ್ಟಿ ಆದ ಘಟನೆ ನಡೆದಿದೆ
ಮಧ್ಯಾಹ್ನ ಸಿಲೆಂಡರ ತುಂಬಿದ ಲಾರಿ ಬೇಲೂರು ಕಡೆ ಹೊರಟಿದ್ದು ಕೃಷಿ ವಿಶ್ವವಿದ್ಯಾಲಯದ ಮುಂದೆ ಇರುವ ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ. ಸಿಲೆಂಡರ ತುಂಬಿದ ಲಾರಿ ಪಲ್ಟಿ ಆಗಿದ್ದು ಅದೃಷ್ಟವಶಾತ್ ಯಾವುದೆ ರೀತಿಯ ಹಾನಿಯಾಗಿಲ್ಲಾ .
ಇನ್ನು ಸ್ಥಳಕ್ಕೆ ಆಗಮಿಸಿದ ಸಂಚಾರಿ ಹಾಗು ಉಪ ನಗರ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆಗಮಿಸಿ ಪರಿಶೀಲನೆ ನಡೆಸಿದಾಗ ಲಾರಿ ಅಲ್ಲಿ ಇದ್ದ ಸಿಲೆಂಡರ ಎಲ್ಲವು ಖಾಲಿ ಇರುವುದರಿಂದ ಯಾವುದೆ ರೀತಿಯಲ್ಲಿ ಹಾನಿ ಉಂಟಾಗಿರುವುದಿಲ್ಲಾ
ಇನ್ನು ಖಾಲಿ ಸಿಲೆಂಡರ ಅಂತಾ ತಿಳದ ಮೇಲೆ ಅಲ್ಲಿನ ಸುತ್ತ ಮುತ್ತಲಿನ ನಿವಾಸಿಗಳು ಹಾಗು ಅಂಗಡಿಗಳ ಮಾಲಿಕರು ನಿಟ್ಟುಸಿರು ಬಿಟ್ಟಿದ್ದಾರೆ