Uncategorized

ಹುಬ್ಬಳ್ಳಿಯಲ್ಲಿ ಬಡ್ಡಿಗೆ ವ್ಯಕ್ತಿಗೆ ಕಿರುಕುಳ.ಜಂಗಲ್ ಬಾಬು, ವಿನಾಯಕ ಸಾವಂತ ಅರೆಸ್ಟ್…!!

ಹುಬ್ಬಳ್ಳಿಯಲ್ಲಿ ಬಡ್ಡಿ ಕಿರುಕುಳ ತಾಳಲಾಗದೇ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ನವ ವಿನೋಭಾ ನಗರದಲ್ಲಿನ ರೈಲ್ವೆ ಕ್ವಾರ್ಟರ್ಸ್’ನಲ್ಲಿ ನಡೆದಿದೆ.

ಪ್ರಕಾಶ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ರೈಲ್ವೆ ಇಲಾಖೆಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು, ಆದರೆ ಇವರು ಇತ್ತಿಚೆಗೆ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮೊದಲು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು.

ಆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚಮಾಮ ಮಾಡುತ್ತಿದ್ದಾಗ ಡೆತ್ ನೋಟ್ ಸಿಕ್ಕದೆ. ಈ ವೇಳೆ ಮೃತ ಪ್ರಕಾಶ 6-7 ಜನರ ಜೊತೆಗೆ ಹಣದ ವ್ಯವಹಾರ ಮಾಡಿಕೊಂಡಿದ್ದ, ಹಣ ಕೊಟ್ಟವರು ಒತ್ತಡ ಹಾಕುತ್ತಿದ್ದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪ ಬಂದಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಗಲ್ ಬಾಬು ಅಲಿಯಾಸ್ ಬಾಬು ಜಂಗಲ್ ಹಾಗೂ ವಿನಾಯಕ ಸಾವಂತ ಎಂಬಾತರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ತಲೆ ಮರಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕಾಶ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಕೆಲವರು ತಲೆಮರಿಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇನ್ನು ಹು-ಧಾ ಅವಳಿನಗರದಲ್ಲಿ ಅನಧಿಕೃತವಾಗಿ ಬಡ್ಡಿ ವ್ಯವಹಾರ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸುಮೋಟೋ ಕೇಸ್ ಹಾಕೋಕ್ಕೆ ಬರಲ್ಲಾ ಹಾಗಾಗಿ ಯಾರಾದರೂ ಅನ್ಯಾಯಕ್ಕೆ ಒಳಗಾದ್ರೆ ಆತ್ಮಹತ್ಯೆ ನಿರ್ಧಾರ ಮಾಡಬಾರದು, ಪೊಲೀಸ್ ಇಲಾಖೆ, ಅಧಿಕಾರಿಗಳನ್ನು ಸಂಪರ್ಕ ಮಾಡಬೇಕು. ಅದನ್ನು ಮೀರಿ ಯಾರಾದರೂ ಬಡ್ಡಿಗಾಗಿ ಕಿರುಕುಳ ನೀಡಿದ್ರೆ ಕಮಿಷನರ್ ಆಫೀಸ್ ಸಂಪರ್ಕ ಮಾಡಿ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!